ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೀಪಾವಳಿ ಹಬ್ಬದ #Deepavali Festival ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
ನೈಋತ್ಯ ರೈಲ್ವೆ #Southwestern Railway ತನ್ನ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳಲ್ಲಿ ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಜನಸಂದಣಿ ನಿರ್ವಹಣಾ ಯೋಜನೆಯನ್ನು ರೂಪಿಸಿದೆ.
ಬೇಡಿಕೆಯಲ್ಲಿನ ನಿರೀಕ್ಷಿತ ಏರಿಕೆಯನ್ನು ಪೂರೈಸಲು, 390 ಟ್ರಿಪ್’ಗಳಲ್ಲಿ ನಿಯಮಿತ ಸೇವೆಗಳಲ್ಲಿ 540 ಹೆಚ್ಚುವರಿ ಬೋಗಿಗಳನ್ನು ಹೆಚ್ಚಿಸುವುದರ ಜೊತೆಗೆ 338 ಟ್ರಿಪ್’ಗಳನ್ನು ಒಳಗೊಂಡ 136 ವಿಶೇಷ ರೈಲುಗಳನ್ನು ಓಡಿಸಲಿದೆ.
ಬಲಪಡಿಸಿದ ಭದ್ರತೆ ಮತ್ತು ಕಣ್ಗಾವಲು
ಹಬ್ಬದ ಅವಧಿಯಲ್ಲಿ ಸುರಕ್ಷತೆ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಕೆಎಸ್’ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ತುಮಕೂರು, ಹಾಸನ, ಮಂಡ್ಯ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಗದಗ, ಬಾಗಲಕೋಟೆ ಮತ್ತು ವಾಸ್ಕೋ ಡ ಗಾಮಾ ಮುಂತಾದ ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚುವರಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನವೀಕರಿಸಿದ ಸಿಸಿಟಿವಿ ವ್ಯವಸ್ಥೆಗಳು ಮತ್ತು ಬ್ಯಾಗೇಜ್ ಸ್ಕಾö್ಯನರ್’ಗಳ ಮೂಲಕ ಕಣ್ಗಾವಲು ತೀವ್ರಗೊಳಿಸಲಾಗಿದೆ. ಅಲ್ಲದೇ, ನಿರಂತರ ಮೇಲ್ವಿಚಾರಣೆ ಮತ್ತು ಭದ್ರತಾ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸ್ಟ್ಯಾಂಡರ್‍ಡೈಸ್ಡ್ ಪವರ್ ಬ್ಯಾಕಪ್’ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರ ಮಾರ್ಗದರ್ಶನ
ಇನ್ನು,ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸಲು, ಹೆಚ್ಚುವರಿ ವಾಣಿಜ್ಯ ಸಿಬ್ಬಂದಿ, ಅಧಿಕಾರಿಗಳು, ಆರ್’ಪಿಎಫ್ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ರೈಲು ವೇಳಾಪಟ್ಟಿಗಳು, ನಿರ್ದೇಶನಗಳು ಮತ್ತು ಟಿಕೆಟ್’ಗಳಿಗೆ ಸಂಬAಧಿಸಿದ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಮೀಸಲಾದ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಯಾಣಿಕರಿಗೆ ಪ್ಲಾಟ್’ಫಾರಂಗಳು, ಲಿಫ್ಟ್’ಗಳು, ಪಾದಚಾರಿ ಸೇತುವೆಗಳು ಮತ್ತು ಅಗತ್ಯ ಸೌಲಭ್ಯಗಳಿಗೆ ಮಾರ್ಗದರ್ಶನ ನೀಡಲು, ಜನನಿಬಿಡ ಪ್ರದೇಶಗಳ ಮೂಲಕ ಸುಲಭ ಸಂಚರಣೆ ಸುಗಮಗೊಳಿಸಲು ಪ್ರಮುಖ ನಿಲ್ದಾಣಗಳಲ್ಲಿ ಪ್ರಮುಖ ‘ಮಾರ್ಗದರ್ಶಕ್’ ಚಿಹ್ನೆಯನ್ನು ಪ್ರದರ್ಶಿಸಲಾಗಿದೆ.
ತುರ್ತು ಸಿದ್ಧತೆ
ಹಬ್ಬದ ಜನರ ಓಡಾಟವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಹೆಚ್ಚುವರಿ ಟಿಕೆಟ್ ಕೌಂಟರ್’ಗಳನ್ನು ತೆರೆಯಲಾಗಿದ್ದು, ಬುಕಿಂಗ್ ಕಚೇರಿಗಳು ಮತ್ತು ಸಾಮಾನ್ಯ ಕೋಚ್ ಪ್ರವೇಶ ಬಿಂದುಗಳಲ್ಲಿ ಕ್ಯೂ ಮ್ಯಾನೇಜರ್’ಗಳನ್ನು ಇರಿಸಲಾಗಿದೆ.
ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸಲು ಪ್ರಮುಖ ನಿಲ್ದಾಣಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ವೇಟಿಂಗ್ ಲಿಸ್ಟ್’ನಲ್ಲಿರುವ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು, ಹಲವಾರು ಸಾಮಾನ್ಯ ರೈಲುಗಳಿಗೆ ಹೆಚ್ಚುವರಿ ಕೋಚ್’ಗಳನ್ನು ಜೋಡಿಸಲಾಗಿದೆ.
ಹಬ್ಬದ ಋತುವಿನಲ್ಲಿ ಪ್ರಯಾಣಿಕರು ಆರಾಮವಾಗಿ ಮತ್ತು ಅನುಕೂಲಕರವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲು ನೈಋತ್ಯ ರೈಲ್ವೆ ಬದ್ಧವಾಗಿದೆ. ಪ್ರತಿ ಪ್ರಮುಖ ಹಬ್ಬಕ್ಕೂ ಹೆಚ್ಚುವರಿ ರೈಲುಗಳನ್ನು ಓಡಿಸುವ ಮೂಲಕ, ನಾವು ಬೇಡಿಕೆಯ ಏರಿಕೆಯನ್ನು ಪೂರೈಸುವುದಲ್ಲದೆ, ವಿಶ್ವಾಸಾರ್ಹ ಮತ್ತು ಜನಸ್ನೇಹಿ ಸೇವೆಗಳನ್ನು ಒದಗಿಸುವ ನಮ್ಮ ಧ್ಯೇಯವನ್ನು ಬಲಪಡಿಸುತ್ತಿದ್ದೇವೆ ಎಂದು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post