ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಕೆಆರ್‌ಎಸ್ ರಸ್ತೆಯ ಸಿಎಫ್‌ಟಿಆರ್‌ಐ ಆವರಣದಲ್ಲಿರುವ ಶ್ರೀ ವ್ಯಾಸರಾಜ ಪೂಜಿತ 700 ವರ್ಷ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಸೋಮವಾರ ಧಾತ್ರಿ ಹವನ ನೆರವೇರಿತು.
ಈ ಸಂದರ್ಭ ವಿಶೇಷ ಉಪನ್ಯಾಸ ನೀಡಿದ ವಿದ್ವಾಂಸ ವ್ಯಾಸತೀರ್ಥಾಚಾರ್ಯ, ಧಾತ್ರಿ (ನೆಲ್ಲಿ) ಹವನದ ವೈಜ್ಞಾನಿಕ ಹಿನ್ನೆಲೆ ಬಹಳ ಮಹತ್ವದ್ದು ಎಂದು ನುಡಿದರು.
ಕಾರ್ತಿಕ ಮಾಸದ ಚತುರ್ದಶಿಯಂದು ನೆಲ್ಲಿ ಮರದ ಬಳಿ ಹವನ ಮಾಡಿದರೆ ಅನಂತ ಪುಣ್ಯ ಲಭಿಸುತ್ತದೆ. ಆ ಮರದ ಕೆಳಗೆ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುವುದರಿಂದ ಧನಾತ್ಮಕ ಶಕ್ತಿ ನಮ್ಮಲ್ಲಿ ಮೈಗೂಡುತ್ತದೆ. ನಮ್ಮ ಆರೋಗ್ಯ ಪಾಲನೆಯಲ್ಲಿ ನೆಲ್ಲಿಕಾಯಿ ಪಾತ್ರ ಬಹು ಮಹತ್ವದ್ದಾಗಿದೆ. ಇವುಗಳ ಹಿನ್ನೆಲೆಯಲ್ಲಿ ನಮ್ಮ ಪೂರ್ವಿಕರು ಧಾತ್ರಿ ಹವನದೊಂದಿಗೆ ವನಭೋಜನ ಜಾರಿಗೆ ತಂದಿದ್ದಾರೆ ಎಂದರು.
ಉತ್ತರಾದಿ ಮಠದ ವ್ಯವಸ್ಥಾಪಕ ಮತ್ತು ವಿದ್ವಾಂಸ ಅನಿರುದ್ಧಾಚಾರ್ಯ ಪಾಂಡುರAಗಿ ಉಪನ್ಯಾಸ ನೀಡಿ, ದೇವರ ಮಹಿಮೆ ಅರಿಯುವುದೇ ಜೀವನದ ಪರಮ ಉz್ದೆÃಶ ಎಂದರು. ಪ್ರತಿಯೊಂದು ಜೀವಿಯನ್ನೂ ದೇವರು ಪಾಲನೆ ಮಾಡಿದ್ದಾನೆ. ಅವುಗಳಿಗೆ ಬೇಕಾದ ಆಹಾರಗಳನ್ನೂ ಸೃಷ್ಟಿಸಿದ್ದಾನೆ. ಆಸ್ತಿಕ-ನಾಸ್ತಿಕರೆಂಬ ತಾರತಮ್ಯ ತೋರದೇ ಎಲ್ಲರಿಗೂ ಗಾಳಿ, ಬೆಳಕು, ನೀರು ಮತ್ತಿತರ ಆಹಾರಗಳನ್ನು ದಯಪಾಲಿಸಿದ್ದಾನೆ. ಹಾಗಾಗಿ ಅವನಿಗೆ ಧಾತ್ರಿ ಎಂಬ ಹೆಸರೂ ಇದೆ ಎಂದರು.
ಹಿರಿಯ ವಿದ್ವಾಂಸ ಆದ್ಯ ಗೋವಿಂದಾಚಾರ್ಯರು ನೆಲ್ಲಿಮರದ ಪರಿಸರದಲ್ಲಿ ಹೋಮ, ಹವನದ ನೇತೃತ್ವ ವಹಿಸಿದ್ದರು. ವಿದ್ವಾನ್ ಅನಿರುದ್ಧಾಚಾರ್ಯ ಮತ್ತು ಬಹಿಷ್ಮಿ ಧಾತ್ರಿಹೋಮ ನೆರವೇರಿಸಿದರು. ದೇಗುಲದ ಅರ್ಚಕ ನಾಗಭೂಷಣಾಚಾರ್ಯರು ಶ್ರೀ ವ್ಯಾಸರಾಜ ಪೂಜಿತ 700 ವರ್ಷ ಪುರಾತನವಾದ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜಾದಿಗಳು ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post