ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸೋಸಲೆ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀವ್ಯಾಸತೀರ್ಥ ವಿದ್ಯಾಪೀಠದ ಪ್ರಥಮ ಸುಧಾಮಂಗಳ ಮಹೋತ್ಸವದ ಅಂಗವಾಗಿ ಬುಧವಾರ ವಿದ್ವತ್ ಸಭೆ ಸಂಪನ್ನಗೊಂಡಿತು.
ವ್ಯಾಸತ್ರಯ ಸಹಿತ ಶ್ರೀಮನ್ ನ್ಯಾಯಸುಧಾ ಪರೀಕ್ಷಾ ಕಾರ್ಯಕ್ರಮವು ಶ್ರೀಮದ್ ಉತ್ತರಾದಿ ಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹಾಗೂ ಫಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರ ಶ್ರೀ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥರ ದಿವ್ರೋಪಸ್ಥಿತಿಯಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ವಿಜೃಂಭಿಸಿತು.


ಸೋಸಲೆ ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ ಅವರು ಈ ಇಳಿ ವಯಸ್ಸಿನಲ್ಲೂ ನಿರಂತರ ಪಾಠ ಪ್ರವಚನ ಮಾಡುತ್ತಿರುವುದು ಎಲ್ಲರಿಗೂ ಆದರ್ಶವಾಗಿದೆ. ಅದರ ಫಲವನ್ನು ವಿದ್ಯಾರ್ಥಿಗಳ ಪರೀಕ್ಷೆ ಗುಣಮಟ್ಟದಲ್ಲಿ ನಾವು ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.

ಶಾಸ್ತ್ರ ವಿದ್ಯೆ ಅಧ್ಯಯನ ಮಾಡಿದವರಿಗೆ ಸಮಾಜ ವಿಶೇಷ ಗೌರವ ನೀಡುತ್ತದೆ. ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯ ಪಾಲನೆಗೆ ಬದ್ಧರಾಗಿರುವ ಮಕ್ಕಳನ್ನು ನಾವು ರೂಪಿಸುವ ಹೊಣೆ ಇದೆ. ಸನಾತನ ಭಾರತೀಯ ಸಂಸ್ಕೃತಿ ಯನ್ನು ಉಳಿಸಿ, ಬೆಳೆಸಲು ಸುಧಾ ಮಂಗಳ ಮಾಡಿದ ಯುವಕರು ಸಿದ್ಧರಾಗಿರುವುದು ಶ್ಲಾಘನೀಯ.
-ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠ
ಪಲಿಮಾರು ಶ್ರೀ ಆದರ್ಶ
ಪಲಿಮಾರು ಶ್ರೀಪಾದರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ವಿದ್ವಾಂಸ ಆನಂದ ತೀರ್ಥ ನಾಗಸಂಪಿಗೆ ಆಚಾರ್ಯರು’ ವಿದ್ಯಾರ್ಥಿ ದಿಸೆಯಲ್ಲಿ ಯಾವ ರೀತಿ ಇರಬೆಕೆಂಬುವುದಕ್ಕೆ ಪಲಿಮಾರು ಶ್ರೀಪಾದರು ಆದರ್ಶರಾಗಿದ್ದಾರೆ. ಅನೇಕ ವರ್ಷಗಳ ಪೂರ್ವದಲ್ಲಿ ಅಧ್ಯಯನ ನಡೆಸಿದ ವಿಷಯಗಳನ್ನು ಇಂದಿಗೂ ತತಕ್ಷಣ ನಿರೂಪಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಪೂಜ್ಯರ ವಿದ್ವತ್ತನ್ನು ಪರಿಚಯಿಸಿದರು.


ಹಿರಿಯ ವಿದ್ವಾಂಸರಾದ ಮಾಹುಲಿ ವಿದ್ಯಾಸಿಂಹಾಚಾರ್ಯ, ಮಹಾಮಹೋಪಾಧ್ಯಾಯ ಹರಿದಾಸ ಭಟ್, ಬಾಳಗಾರು ರುಚಿರಾಚಾರ್ಯ, ಶೇಷಗಿರಿ ಆಚಾರ್ಯ, ಶ್ರೀನಿವಾಸಮೂರ್ತಿ ಆಚಾರ್ಯ, ಸಗ್ರೀ ಆನಂದತೀರ್ಥಾಚಾರ್ಯ, ಸತ್ತೆಗಿರಿ ಧೀರೆಂದ್ರಾಚಾರ್ಯ. ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕರಾದ ಮಧ್ವೇಶ ಆಚಾರ್ಯ ನೆಡಿಲ್ಲಾಯ, ಮಾತರಿಶ್ವ ಆಚಾರ್ಯ ರಾಮಕೃಷ್ಣ ಭಟ್, ಜಯತೀರ್ಥ ವಿದ್ಯಾಪೀಠದ ಪಂಡಿತ ಪ್ರಹ್ಲಾದ ಆಚಾರ್ಯ, ಹೊನ್ನಾಳಿ ಸತ್ಯಬೋಧ ಅಚಾರ್ಯ, ಬಾದರಾಯಣ ಆಚಾರ್ಯ, ಶ್ರೀವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಮಧು ಸೂದನಾಚಾರ್ಯ, ಡಾ. ಶ್ರೀ ನಿಧಿ ಪ್ಯಾಟಿ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post