ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹಿಸಬೇಕು. ಹಾಗೂ ಮಕ್ಕಳು ಅತಿ ಹೆಚ್ಚು ಶ್ರಮವಹಿಸಿ ಓದಬೇಕು ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ದೇವಯ್ಯನಹುಂಡಿ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ವಿದ್ಯಾಸ್ಪಂದನ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪುಸ್ತಕ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ತಂದಿದೆ. ಅದರ ಸದ್ಭಳಕೆ ಮಾಡಿಕೊಂಡು ಓದಬೇಕು. ಸರ್ಕಾರಿ ಶಾಲೆಯ ಮಕ್ಕಳು ಅತ್ಯುತ್ತಮ ವಿದ್ಯಾವಂತರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

Also read: ಗಮನಿಸಿ! ಶಿವಮೊಗ್ಗ ನಗರಕ್ಕೆ ಈ ಎರಡು ದಿನ ನೀರು ಪೂರೈಕೆ ವ್ಯತ್ಯಯ
ವಿದ್ಯಾಸ್ಪಂದನ ಸಂಸ್ಥೆ ಅಧ್ಯಕ್ಷ ಪುನೀತ್ ಮಾತನಾಡಿ, ತಮ್ಮ ಸಂಸ್ಥೆಯಿಂದ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗೆ ಬೇಕಾದ ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಪೆನ್, ಪೆನ್ಸಿಲ್ ಕಿಟ್‌ಗಳನ್ನು ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳಿಗೆ ವಿತರಿಸಲಾಗುತ್ತಿದೆ. ಮಕ್ಕಳು ಬಾಲ್ಯದಿಂದಲೇ ಶಿಸ್ತನ್ನು ಮೈಗೂಡಿಸಿಕೊಂಡು ದೇಶ ಕಾಯುವ ಸೈನಿಕರು, ಪೋಷಕರು ಮತ್ತು ಶಾಲಾ ಶಿಕ್ಷಕರನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್ ಮಾತನಾಡಿ, ತಾವು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಬ್ಯಾಂಕ್ ನೌಕರರಾಗಿ, ಈಗ ಸಮಾಜದ ಸೇವೆಯನ್ನು ಮಾಡುತ್ತಿದ್ದೇವೆ. ನಮ್ಮ ಎಲ್ಲಾ ಬೆಳವಣಿಗೆಯ ಹಿಂದೆ ಇರುವುದು ಶಿಕ್ಷಣ, ನಾವು ಬಂದ ದಾರಿಯನ್ನು ನೆನಪಿಸುವುದೇ ಶಿಕ್ಷಣ. ಹಾಗಾಗಿ ತಾವೆಲ್ಲರೂ ಚೆನ್ನಾಗಿ ಓದಿ ಭಾರತದ ಭ್ಯವಿಷ್ಯವಾಗಬೇಕೆಂದು ಮಕ್ಕಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಶಿಕ್ಷಣ ಇಲಾಖೆಯ ಮಹದೇವು, ಶಾಲೆಯ ಮುಖ್ಯೋಪಾಧ್ಯಾಯರಾದ ಪಿ. ಚಂದ್ರಪ್ಪ, ವಿದ್ಯಾಸ್ಪಂದನ ಸದಸ್ಯರಾದ ನಾಗೇಶ್, ರಾಮಕೃಷ್ಣ, ಸೀತಾರಾಂ, ವಸಂತ್ ಕುಮಾರ್, ಬಿಜೆಪಿ ಮುಖಂಡ ಪ್ರದೀಪ್ ಕುಮಾ, ಶಾಲೆಯ ಶಿಕ್ಷಕರು, ಪೋಷಕರು ಹಾಗೂ ದೇವಯ್ಯನಹುಂಡಿಯ ಮುಖ್ಯಸ್ಥರು ಹಾಜರಿದ್ದರು.










Discussion about this post