ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸ್ವಂತ ಅಜ್ಜಿಯನ್ನೇ ಕೊಂದು ವೆಬ್ ಸೀರೀಸ್ ಶೈಲಿಯಲ್ಲಿ ಶವ ಸುಡಲು ಯತ್ನಿಸಿದ ಯುವಕನೊಬ್ಬ, ತಪ್ಪಿಸಿಕೊಳ್ಳುವ ಐಡಿಯಾದಿಂದಲೇ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಇಲ್ಲಿನ ಗಾಯತ್ರಿಪುರಂ ನಿವಾಸಿ ಸುಲೋಚನ(75) ಮೃತ ಅಜ್ಜಿಯಾಗಿದ್ದು, ಸುಪ್ರೀತ್(23) ಅಜ್ಜಿಯನ್ನು ಕೊಂದ ಆರೋಪಿ ಮೊಮ್ಮಗ.
ಇಷ್ಟಕ್ಕೂ ನಡೆದಿದ್ದೇನು?
ಆರೋಪಿ ಸುಪ್ರೀತ್ ಕೋಪದಲ್ಲಿ ತನ್ನ ಅಜ್ಜಿ ಸುಲೋಚನ ಅವರನ್ನು ತಳ್ಳಿ ಕೊಂದಿದ್ದಾನೆ. ಸಿಕ್ಕಿ ಬೀಳುವ ಭಯದಲ್ಲಿ ವೆಬ್ ಸೀರೀಸ್’ಗಳಲ್ಲಿ ಶವ ಸುಡುವ ರೀತಿಯಲ್ಲಿ ವಿಲೇವರಿ ಮಾಡಲು ತಂತ್ರ ರೂಪಿಸಿದ್ದಾನೆ. ಇದಕ್ಕಾಗಿ ಹೆಣವನ್ನು ಪ್ಯಾಕ್ ಮಾಡಿಕೊಂಡು ಕಾರಿನಲ್ಲಿ ಊರೆಲ್ಲಾ ಸುತ್ತಾಡಿದ್ದಾನೆ. ಮಾತ್ರವಲ್ಲ, ಕಾರಿನಲ್ಲೇ ಅಜ್ಜಿಯ ಹೆಣ ಇಟ್ಟುಕೊಂಡು ಪೊಲೀಸರಿಗೆ ಆಕೆ ಕಾಣೆಯಾಗಿರುವ ಕುರಿತಾಗಿ ದೂರು ನೀಡಿದ್ದಾನೆ.
Also read: ಸಮಾಜಮುಖಿ ಸ್ಪಂದನೆಯೇ ಬಹು ಎತ್ತರಕ್ಕೆ ನಮ್ಮನ್ನು ಕೊಂಡೊಯ್ಯಲಿದೆ: ಜಿ.ಎಸ್. ನಾರಾಯಣರಾವ್
ಈ ನಡುವೆ ಕೆಆರ್’ಎಸ್ ಹಿನ್ನೀರಿನ ಪ್ರದೇಶದಲ್ಲಿ ವೃದ್ದೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ತನಿಖೆ ಆರಂಭಿಸಿದ ದಕ್ಷಿಣ ವಿಭಾಗದ ಪೊಲೀಸರು ಶವದ ಕೂದಲು ಹಾಗೂ ಕನ್ನಡದ ಆಧಾರದಲ್ಲಿ ಜಾಡು ಹಿಡಿದಿದ್ದರು.
ಈ ವೇಳೆ ಸುಪ್ರೀತ್ ನಜರಾಬಾದ್ ಠಾಣೆಯಲ್ಲಿ ದಾಖಲಿಸಿದ್ದ ಮಿಸ್ಸಿಂಗ್ ಕಂಪ್ಲೆಂಟ್ ಕುರಿತಾಗಿ ಅನುಮಾನಗೊಂಡು ಅದರ ಜೊತೆಯಲ್ಲಿ ಸಾಮ್ಯತೆ ಮಾಡಿ, ಸುಪ್ರೀತ್’ನಲ್ಲಿ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದೇನು?
ಪೊಲೀಸರ ವಿಚಾರಣೆ ತೀವ್ರಗೊಂಡ ವೇಳೆ ಸತ್ಯ ಒಪ್ಪಿಕೊಂಡಿರುವ ಆರೋಪಿ ಸುಪ್ರೀತ್ ಅಜ್ಜಿ ಪದೇ ಪದೇ ತನಗೆ ಬೈಯ್ಯುತ್ತಿದ್ದರು. ಹೀಗಾಗಿ, ಹತ್ಯೆ ಮಾಡಿದೆ. ಮೇ 28ರಂದು ಆಕೆಯನ್ನು ಹೊಡೆದು, ಆನಂತರ ದಿಂಬಿನಿAದ ಉಸಿರುಗಟ್ಟಿಸಿ ಕೊಲೆ ಮಾಡಿದೆ. ತರುವಾಯ, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್’ನಲ್ಲಿ ಹಾಕಿ, ಕೆಆರ್’ಎಸ್ ಹಿನ್ನೀರಿನಲ್ಲಿ ಸುಟ್ಟು ಗುಂಡಿಯಲ್ಲಿ ಬಿಸಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ.
ಅಜ್ಜಿ ಕಾಣೆಯಾಗಿರುವ ಕುರಿತಾಗಿ ದೂರು ನೀಡಿದ ನಂತರ ಸುಪ್ರೀತ್ ಮಾತಿನ ವರಸೆಯನ್ನು ಬದಲಿಸಿದ್ದು ಪೊಲೀಸರಿಗೆ ಆತನ ಮೇಲೆ ಅನುಮಾನ ಮೂಡಲು ಜಾಡು ಸಿಕ್ಕಂತಾಯಿತು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post