ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನಲ್ಲಿ ನಡೆಯಲಿರುವ ದಸರಾ ಹಬ್ಬದ #Dasara Festival ಸಂದರ್ಭದಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು, ನೈಋತ್ಯ ರೈಲ್ವೆಯು #SouthWesternRailway ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2, 2025ರವರೆಗೆ ಈ ಕೆಳಗಿನ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗಳನ್ನು ಒದಗಿಸಲು ನಿರ್ಧರಿಸಿದೆ.
- ರೈಲು ಸಂಖ್ಯೆ 16225/16226 ಮೈಸೂರು–ಶಿವಮೊಗ್ಗ ಟೌನ್–ಮೈಸೂರು ಎಕ್ಸ್ ಪ್ರೆಸ್ ರೈಲು ಬೆಳಗುಳ, ಕೃಷ್ಣರಾಜಸಾಗರ, ಕಲ್ಲೂರು ಎಡಹಳ್ಳಿ ಹಾಲ್ಟ್, ಸಾಗರಕಟ್ಟೆ, ಡೋರನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ಹಾಲ್ಟ್, ಹೊಸ ಅಗ್ರಹಾರ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
- ರೈಲು ಸಂಖ್ಯೆ 16222/16221 ಮೈಸೂರು–ತಾಳಗುಪ್ಪ–ಮೈಸೂರು ಎಕ್ಸ್ ಪ್ರೆಸ್ ರೈಲು ಕೃಷ್ಣರಾಜಸಾಗರ, ಕಲ್ಲೂರು ಎಡಹಳ್ಳಿ ಹಾಲ್ಟ್, ಡೋರನಹಳ್ಳಿ, ಹಂಪಾಪುರ ಮತ್ತು ಅರ್ಜುನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
- ರೈಲು ಸಂಖ್ಯೆ 17301/17302 ಮೈಸೂರು–ಬೆಳಗಾವಿ–ಮೈಸೂರು ಎಕ್ಸ್ ಪ್ರೆಸ್ ರೈಲು ಬೆಳಗುಳ, ಸಾಗರಕಟ್ಟೆ, ಹೊಸ ಅಗ್ರಹಾರ, ಅಕ್ಕಿಹೆಬ್ಬಾಳು, ಬೀರಹಳ್ಳಿ ಹಾಲ್ಟ್, ಮಂದಗೆರೆ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಮಾಡಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವಾಗ ಈ ತಾತ್ಕಾಲಿಕ ನಿಲುಗಡೆಗಳನ್ನು ಗಮನದಲ್ಲಿಟ್ಟುಕೊಳ್ಳಲು ಸೂಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post