ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ ಶ್ರೀರಾಂಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನೆಡೆದ ಡಾ. ಪೃಥು ಪಿ ಅದ್ವೈತ್ ಉಪನಯನದ ಕಾರ್ಯಕ್ರಮದಲ್ಲಿ ಧರ್ಮ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಭಾಗಿಯಾದ ಮಾಜಿ ಸಂಸದ ಪ್ರತಾಪ ಸಿಂಹ ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಮಾಡುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮೈಸೂರು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಸ್ತೋತ್ರ ಪಠಣದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಎಂಟು ವರ್ಷದ ಬಾಲಕ ಪೃಥು ಪಿ ಅದ್ವೈತ್ ಉಪನಯನ ಧರ್ಮ ಜಾಗೃತಿಯ ವೇದಿಕೆಯಾಗಿ ಪರಿಣಮಿಸಿರುವುದು ಸಂತೋಷದ ವಿಷಯ. ಎಂದರು.

ಈಗಾಗಲೇ ವಿಶ್ವ ದಾಖಲೆ ನಿರ್ಮಿಸಿರುವ ಪೃಥು ಪಿ ಅದ್ವೈತ್ ಉಪನಯನದಲ್ಲಿ ವಿಶೇಷವಾಗಿ ಧರ್ಮ ಜಾಗೃತಿ ಮೂಡಿಸುವ ಫಲಕಗಳು, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಮಾತೃ ದೇವೋ ಭವ, ಪಿತೃ ದೇವೋ ಭವ ಎಂಬ ವೇದದ ಸಂದೇಶದ ಫಲಕಗಳು, ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಿ ಸಂವತ್ಸರ ಕಳೆದ ಕಾಲಘಟ್ಟದಲ್ಲಿ ಅದರ ಹೋರಾಟ ಮರೆಯಬಾರದು ಎಂದು ಅಯೋಧ್ಯೆ ಶ್ರೀರಾಮನ ಫೋಟೋ ನೀಡುವುದು ಹಾಗೂ ಧಾರ್ಮಿಕ ಆಚರಣೆಗಳನ್ನು ಮಾಡುವ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಿಶೇಷವಾಗಿ ಧರ್ಮ ಜಾಗೃತಿ ಮಾಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post