ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೇಕು ಎಂದೇ ಟಿಪ್ಪು ಎಕ್ಸ್’ಪ್ರೆಸ್ ರೈಲಿನ ಹೆಸರನ್ನು ಬದಲವಣೆ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು ಶ್ರೀರಂಗಪಟ್ಟಣಕ್ಕೆ ಸಂಬಂಧಿಸಿದವನು, ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಸಾಮ್ರಾಜ್ಯಕ್ಕೆ ಮಹಾರಾಜರು ಕೊಟ್ಟಿರುವ ನೂರು ಕೊಡುಗೆ ನೀಡುತ್ತೇನೆ. ಆದರೆ, ಟಿಪ್ಪು ಮೈಸೂರಿಗೆ ಕೊಟ್ಟಿರುವ ಮೂರು ಕೊಡುಗೆಗಳನ್ನು ತಾಕತ್ತಿದ್ದರೆ ತಿಳಿಸಿ. ಉದ್ಧೇಶ ಪೂರ್ವಕವಾಗಿಯೇ ರೈಲಿನ ಹೆಸರು ಬದಲಾವಣೆ ಮಾಡಿದ್ದೇನೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಒಂದು ರೈಲಿಗೆ ಇರಿಸಿರುವ ಹೆಸರನ್ನು ಬದಲಾವಣೆ ಮಾಡಿದ್ದು ಇದೇ ಮೊದಲು. ಮೈಸೂರು ಅಭಿವೃದ್ಧಿಯ ಧ್ಯೋತಕಗಳ ಹಿಂದಿರುವ ಕೊಡುಗೆ ಮಹಾರಾಜರದ್ದೇ ಹೊರತು, ಟಿಪ್ಪುವಿನದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಿಂದ ದೇಶದ ಪ್ರಮುಖ ನಗರಗಳಿಗೆ ಕಡಿಮೆ ಅವಧಿಯಲ್ಲಿ 10 ರೈಲುಗಳನ್ನು ಕೇಂದ್ರದಿಂದ ತಂದಿದ್ದೇನೆ ಎಂದವರು ತಿಳಿಸಿದರು. ಟಿಪ್ಪು ಕೆಟ್ಟ ಕೆಲಸಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ವ್ಯಕ್ತಿ. ಇಂತಹ ವ್ಯಕ್ತಿಯ ಹೆಸರು ನಮ್ಮೂರ ರೈಲಿಗೆ ಬೇಡ ಎಂದೇ ಬದಲಾವಣೆ ಮಾಡಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post