ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಮ್ಮ ಪ್ರತಿನಿತ್ಯದ ಜೀವನದಲ್ಲಿ ವಿಜ್ಞಾನದ ಅನುಭವವಿರುತ್ತದೆ ಅದನ್ನು ಗಮನಿಸಬೇಕು. ಶಾಲೆಗಳಲ್ಲಿ ವಿಜ್ಞಾನದ ವಿಷಯದ ಆಸಕ್ತಿ ಬೆಳಿಸಿಕೊಂಡರೆ ಅದು ಬದುಕಲ್ಲಿ ಬಹಳ ಬದಲಾವಣೆ ತರುತ್ತದೆ ಎಂದು ಹಿರಿಯ ವಿಜ್ಞಾನಿ ಎಚ್. ಮೋಹನದಾಸ್ ಶಾನಭೋಗ್ ತಿಳಿಸಿದರು.
ವಿದ್ಯಾಸ್ಪಂದನ ಸಂಸ್ಥೆಯಿಂದ ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪಠ್ಯ ಪರಿಕರಣಗಳ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವವನ್ನು ಹಾಗೂ ನಿತ್ಯ ಜೀವನದಲ್ಲಿ ವಿಜ್ಞಾನದ ಪುಕ್ರಿಯೆಗಳನ್ನು ಗುರುತಿಸುವುದನ್ನು ವಿವರಿಸಿದರು.
ತಮ್ಮ ಪ್ರಾಥಮಿಕ ಶಿಕ್ಷಣದ ಕೋಟಾ ಗ್ರಾಮದ ವಿವೇಕ ವಿದ್ಯಾಸಂಸ್ಥೆಯಲ್ಲಿ ಪಡೆದ ಅನುಭವದಿಂದ ತಮ್ಮ ಜೀವನದ ಬಲವಾಗಿದೆ. ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿರಬೇಕು. ಮಕ್ಕಳು ಗಿಡ ಮರಗಳನ್ನು ನೋಡಿ ಕಲಿಯಬೇಕು. ಕೃಷಿ ಕ್ಷೇತ್ರದಲ್ಲಿ ವಿಜ್ಞಾನದ ಬಹಳ ಇದೆ, ಮಕ್ಕಳು ಕೃಷಿಯಲ್ಲಿಯೂ ಸಹ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ವಿದ್ಯಾಸ್ಪಂದನ ಅಧ್ಯಕ್ಷ ಪುನೀತ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಲು ತಮ್ಮ ಸಂಸ್ಥೆಯಿಂದ ಶಾಲೆಗೆ ಸರಿ ಸುಮಾರು ಹತ್ತು ಸಾವಿರ ಮೌಲ್ಯದ ಒಟ್ಟು ಇಪ್ಪತ್ತೈದು ಪ್ರಯೋಗದ ವಸ್ತುಗಳು, ಹೃದಯ, ಮೆದುಳು, ಶ್ವಾಸಕೋಶ, ಅಸ್ತಿಪಂಜರದ ಮಾದರಿಗಳನ್ನು ನೀಡುತ್ತಿದ್ದು, ಮಕ್ಕಳು ಆಸಕ್ತಿ ವಹಿಸಿ ಕಲಿಯಬೇಕು ಎಂದರು.
ವಿಜ್ಞಾನದ ಮಾತೃ ಭೂಮಿಯಾಗಿ ನಮ್ಮ ಭಾರತವಿದೆ. ನಮ್ಮ ಪುರಾಣಗಳಲ್ಲಿ, ವೇದ ಉಪನಿಷತ್ತುಗಳಲ್ಲಿ ವಿಜ್ಞಾನದ ವಿಚಾರವನ್ನು ಹೇಳಿದ್ದಾರೆ, ಭೂಮಿಯ ರಚನೆ, ಸೌರವ್ಯೂಹ, ಭೂಮಿ ಹಾಗೂ ಸೂರ್ಯನ ಅಂತರ ಎಲ್ಲವನ್ನೂ ಆಧುನಿಕ ವಿಜ್ಞಾನಿಗಳು ಹೇಳುವ ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿ ಮುನಿಗಳು ಹೇಳಿದ್ದಾರೆ. ಭಾರತದ ಶ್ರೀರಾಮಸೇತುವನ್ನು ರಚಿಸಲು ಸಿದ್ಧಮಾಡಿದ ನಳ ಮತ್ತು ನೀಳರು ಸಿವಿಲ್ ಇಂಜಿನಿಯರ್ ಗಳ ಇಂದಿನ ನವೀನ ಮಾದರಿ ಮಾಡಲು ಸ್ಫೂರ್ತಿಯಾಗಿದ್ದಾರೆ. ಭಾರತದ ಮಹಾಪುರಾಣಗಳು ನಮಗೆ ವಿಜ್ಞಾನ, ಸಮಾಜ, ಇತಿಹಾಸ, ರಾಜಕೀಯ, ಭೂಗೋಳ ಎಲ್ಲವನ್ನು ಪರಿಚಯಿಸುತ್ತದೆ ಆದರೆ ದುರ್ದೈವ ನಾವು ಅದರಲ್ಲಿ ಆಸಕ್ತಿ ಕಳೆದುಕೊಂಡೆವು ಎಂದರು.
ನೂತನ ವಿಜ್ಞಾನದ ಅಧ್ಯಯನದ ಜೊತೆಗೆ ನಾವು ಪುರಾಣದ ಪಕರಣಗಳನ್ನು ತುಲನೆ ಮಾಡಿದರೆ ಆಗ ನಮಗೆ ಎರಡರ ಮಹತ್ವವು
ತಿಳಿಯುತ್ತದೆ. ಮಕ್ಕಳು ಶಾಲೆಯಲ್ಲಿ ಶಿಸ್ತಿನಿಂದ ಇರಬೇಕು. ಮಕ್ಕಳು ಭಾರತ ಸೈನಿಕರನ್ನು, ಪೋಷಕರನ್ನು, ಶಾಲೆಯ
ಶಿಕ್ಷಕರನ್ನು ತಮ್ಮ ಜೀವನದಲ್ಲಿ ಗೌರವಿಸಬೇಕು. ಮಕ್ಕಳು ತಮ್ಮ ಜೀವನದಲ್ಲೇ ಸ್ವಚ್ಛತೆಗೆ ಮಹತ್ವ ಕೊಡಬೇಕು ಸ್ವಚ್ಛಭಾರತಕ್ಕೆ
ಮಕ್ಕಳು ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಪ್ರತಿ ದಿನ ಕನ್ನಡ ದಿನಪತ್ರಿಕೆ ಹಾಗೂ ಪಠ್ಯವನ್ನು ತಪ್ಪದೆ ಓದಬೇಕು ಎಂದು
ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಮುಖ್ಯೋಪಾದ್ಯಾಯರಾದ ಬಸವರಾಜು, ವಿಜ್ಞಾನ ಶಿಕ್ಷಕರಾದ ಯೋಗೇಶ್, ಪ್ರಗತಿಪರ ರೈತ ಲೋಕೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಹದೇವಯ್ಯ, ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post