ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅಭಿನವ ಶಂಕರಾಲಯದಲ್ಲಿ ಶುಕ್ರವಾರ ಶಂಕರ ಮಠದ #ShankarMutt ಶ್ರೀ ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ ಮತ್ತು ಶಿಖರ ಕುಂಭಾಭಿಷೇಕ, ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
ದೇಗುಲದ ಆವರಣದ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ #SriShankaracharya ಮತ್ತು ಶ್ರೀ ನೃಸಿಂಹ ಭಾರತೀ ತೀರ್ಥರ ಸನ್ನಿಧಿಗಳಲ್ಲಿ ಪೂಜೆ, ಮಂಗಳಾರತಿ ಸಮರ್ಪಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ, ನಂತರ ದೇಗುಲಕ್ಕೆ 7 ಅಡಿ ಎತ್ತರದ ಬಂಗಾರ ಲೇಪಿತ ಕಂಚಿನ ಕಳಸಕ್ಕೆ ವಿಧಿ ವಿಧಾನಗಳ ಮೂಲಕ ಪೂಜೆ ಸಮರ್ಪಿಸಿದರು.

Also read: ಜಪಾನ್: ತೈವಾನ್‌ನಲ್ಲಿ ಪ್ರಬಲ ಭೂಕಂಪ | ನಾಲ್ವರು ಸಾವು
ನೂರಾರು ಮಾತೆಯರಿಂದ ಸೌಂದರ್ಯ ಲಹರೀ ಪಾರಾಯಣ ನಡೆಯಿತು. ಎಲ್ಲರಿಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಮಠದ ಪ್ರಮುಖರು, ವಿದ್ವಾಂಸರು ಇದ್ದರು.
ಏ. 6ರ ಬೆಳಗ್ಗೆ 9ಕ್ಕೆ ಜಗದ್ಗುರುಗಳು ಸಾರ್ವಜನಿಕ ದರ್ಶನ ನೀಡಿ, ಪಾದಪೂಜೆ ಮತ್ತು ಭಿಕ್ಷಾ ವಂದನೆ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭ ಅವರು ಶಿಷ್ಯರಿಗೆ, ಭಕ್ತರಿಗೆ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಪ್ರಯಾಣ ಮುಂದುವರಿಸಲಿದ್ದಾರೆ ಎಂದು ಅಭಿನವ ಶಂಕರಾಲಯದ ಧರ್ಮಾಧಿಕಾರಿ ಎಚ್. ರಾಮಚಂದ್ರನ್ ತಿಳಿಸಿದ್ದಾರೆ.
ಇಂದು ಸಂಗೀತ
6ರಂದು ಖ್ಯಾತ ಕಲಾವಿದೆ ಅಪರ್ಣಾ ಪಂಡಿತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಆಯೋಜನೆಗೊಂಡಿದೆ. ರೂಪನಗುಡಿ ರತ್ನತೇಜ ಪಿಟೀಲು ಮತ್ತು ಪ್ರಣವ ಸುಬ್ರಹ್ಮಣ್ಯ ಅವರು ಮೃದಂಗ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post