ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜಾನಪದ ಗೀತೆಗಳು ನಮ್ಮ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಸರಳವಾಗಿ ಹೇಳುವ ವಿಧಾನವಾಗಿದೆ, ಸಂಗೀತ ಎಲ್ಲರನ್ನೂ ಆಕರ್ಷಿಸುತ್ತದೆ. ಅಂತಹ ಸಂಗೀತದಲ್ಲಿ ಜಾನಪದದ ಮೂಲಕ ನಮ್ಮ ಪರಂಪರೆ ಪರಿಚಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಕ್ರಿಯಾ ಜಾನಪದ ಮಹಿಳಾ ತಂಡದ ಲಕ್ಷ್ಮೀ ಸುದರ್ಶನ್ ತಿಳಿಸಿದರು.
ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಬನಶಂಕರಿ ಬೊಂಬೆ ಮನೆಯಲ್ಲಿ ಕ್ರಿಯಾ ಜಾನಪದ ಮಹಿಳಾ ತಂಡದಿಂದ ಶುಶ್ರಾವ್ಯವಾದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹತ್ತಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ಹಾಡಿ ಬನಶಂಕರಿ ಬೊಂಬೆ ಮನೆಯ ಸಂಗೀತ ಸಂಜೆಯಲ್ಲಿ ಭಾಗವಹಿಸಿ ಎಲ್ಲರನ್ನೂ ಒಂದು ಗಂಟೆಗಳ ಕಾಲ ಮಂತ್ರ ಮುಗ್ದರನ್ನಾಗಿ ಮಾಡಿದರು. ಸಿನಿಮಾ ಗೀತೆಗಳೇ ತುಂಬಿ ತುಳುಕುವ ಈ ಸಮಯದಲ್ಲಿ ಜಾನಪದಗಳನ್ನು ಹಾಡಿ ಜಾನಪದದ ಜಾಗೃತಿ ಮೂಡಿಸಿದರು.
Also read: ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರಿಂದ ಪಥ ಸಂಚಲನ
ಕ್ರಿಯಾ ಜಾನಪದ ಮಹಿಳಾ ತಂಡದ ಈ ಜಾನಪದ ಸೇವೆಯನ್ನು ಗುರುತಿಸಿ ಬನಶಂಕರಿ ಬೊಂಬೆ ಮನೆಯಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಬನಶಂಕರಿ ಬೊಂಬೆ ಮನೆಯ ಪೂಜಾ ಮಾತನಾಡಿ, ನಮ್ಮ ಬನಶಂಕರಿ ಬೊಂಬೆ ಮನೆಯನ್ನು ಒಂದು ತಾಸು ಬೇರೆಯದೇ ಲೋಕಕ್ಕೆ ಕರೆದು ಹೋದರಿ, ಜಾನಪದದ ಮೂಲಕ ನಮ್ಮೆಲ್ಲರನ್ನೂ ನಮ್ಮ ಮೂಲ ಗಾಯನಕ್ಕೆ ಕರೆದೊಯ್ದು ನಮ್ಮ ಇತಿಹಾಸ ಪುರುಷರು, ಪವಾಡ ಪುರುಷರು, ದೇವರುಗಳ ವಿವರಣೆ ನೀಡಿದಿರಿ ತಮಗೆ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಿಯಾ ಜಾನಪದ ಮಹಿಳಾ ತಂಡದ ಸುಮಾ ಪ್ರಶಾಂತ್, ಲಕ್ಷ್ಮೀ ಸುದರ್ಶನ್, ನೈಪುಣ್ಯ ಸ್ಕಂದನ್, ಸರಳ ನಟರಾಜನ್, ಶೃತಿ, ತೇಜಶ್ರೀ ಸುರೇಶ್, ಅಂಜನ, ಬನಶಂಕರಿ ಬೊಂಬೆ ಮನೆಯ ಪೂಜಾ, ಸರಸ್ವತಿ, ಪೃಥು ಪಿ ಅದ್ವೈತ್, ಪುನೀತ್, ಶುಭಾ ಎನ್, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post