ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 9ನೇ ವಾರ್ಷಿಕ ಸಮ್ಮೇಳನವನ್ನು ಜ.5ರಿಂದ 7ರವರೆಗೆ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿದೆ.
ಜ.5ರ ಬೆಳಗ್ಗೆ 10.30ಕ್ಕೆ ರಾಮಕೃಷ್ಣ ನಗರದಲ್ಲಿರುವ ರಾಮಕೃಷ್ಣ ಸೇವಾ ಸಂಘದಲ್ಲಿ #RamakrishnaSevaSangha ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ವಾರ್ಷಿಕ ಸಭೆ ಸಂಪನ್ನಗೊಳ್ಳಲಿದೆ. ಮಧ್ಯಾಹ್ನ 3ಕ್ಕೆ ನಗರದ ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಶಾಲೆ ಸಭಾಂಗಣ ಆವರಣದಲ್ಲಿ ಶೋಭಾಯಾತ್ರೆ ಉದ್ಘಾಟನೆಯಾಗಲಿದೆ. ಆದಿಚುಂಚನಗಿರಿ ಮೈಸೂರು #Mysore ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಶೋಭಾಯಾತ್ರೆ ಉದ್ಘಾಟಿಸಲಿದ್ದಾರೆ.
ಶ್ರೀರಾಮಕೃಷ್ಣ ಆಶ್ರಮದ #RamakrishnaAshrama ಅಧ್ಯಕ್ಷ ಶ್ರೀ ಮುಕ್ತಿದಾನಂದಜೀ ಮಹರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ಹರೀಶ್‌ಗೌಡ, ಮಾಜಿ ಎಂಎಲ್‌ಸಿ ಡಿ. ಮಾದೇಗೌಡ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ರಾಮಕೃಷ್ಣ ವಿದ್ಯಾಶಾಲೆ ಸಂಚಾಲಕ ಶ್ರೀ ಯುಕ್ತೇಶಾನಂದಜೀ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಅದೇ ದಿನ ಸಂಜೆ 6.45ಕ್ಕೆ ಭಕ್ತ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಯುವ ಸಮ್ಮೇಳನ
ಜ.6ರ ಬೆಳಗ್ಗೆ 8ಕ್ಕೆ ಯುವ ಸಮ್ಮೇಳನ ನಡೆಯಲಿದೆ. ರಾಜ್ಯದ ವಿವಿಧ ಭಾಗದಲ್ಲಿರುವ ರಾಮಕೃಷ್ಣ ಮಠ, ಮಂದಿರದ ಪ್ರಮುಖ ಯತಿಗಳಾದ ಸ್ವಾಮಿ ಮಂಗಳನಾಥಾನಂದಜೀ, ಮಾತಾಜಿ ವಿವೇಕಮಯಿ, ಸ್ವಾಮಿ ನಿರ್ಭಯಾನಂದ ಸರಸ್ವತಿ, ಚಕ್ರವರ್ತಿ ಸೂಲಿಬೆಲೆ, ಡಾ. ಬಿ.ವಿ. ಆರತಿ, ಸ್ವಾಮಿ ಮಹಾಮೇಧಾನಂದ ಜೀ, ಸ್ವಾಮಿ ತ್ಯಾಗೀಶ್ವರಾನಂದಜೀ ಸೇರಿದಂತೆ ವಿವಿಧ ಮಠಾಧೀಶರು, ಪ್ರಖ್ಯಾತ ಪ್ರವಚನಕಾರರು ಯುವಜನರಿಗೆ ಮಾರ್ಗದರ್ಶಿಯಾಗಲಿರುವ, ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುವ ಪ್ರೌಢ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 2.30 ಮತ್ತು ಸಂಜೆ 4.30ಕ್ಕೆ ದಿವ್ಯತ್ರಯ ದರ್ಶನಧಾರೆ ಕಾರ್ಯಕ್ರಮ ನಡೆಯಲಿದೆ.
7ರಂದು ಸಮಾರೋಪ
ಜ.7ರ ಸಂಜೆ 5ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ಜರುಗಲಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಸ್.ಎ. ರಾಮದಾಸ್ ಭಾಗವಹಿಸಲಿದ್ದಾರೆ ಎಂದು ಶ್ರೀ ಯುಕ್ತೇಶಾನಂದಜೀ ತಿಳಿಸಿದರು. ಶ್ರೀರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ, ಪದಾಧಿಕಾರಿಗಳಾದ ಕೆಂ.ಪಿ. ಲಿಂಗರಾಜು, ಪುಟ್ಟಸ್ವಾಮಿ, ಚಂದ್ರಶೇಖರ್, ಕೃಷ್ಣ, ಪ್ರಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post