ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಹಿಳೆಯರು ಹಾಗೂ ಶ್ರೀನಗರ ಲಲಿತಾ ಸಹಸ್ರನಾಮ ಬಳಗದ ಮಹಿಳೆಯರು ಭಾರತದ ಸೈನಿಕರಿಗೆ ಶಕ್ತಿ ತುಂಬಲಿ, ಭಾರತೀಯ ಸೈನಿಕರಿಗೆ #Indian Soldier ವಿಜಯವಾಗಲಿ ಎಂದು ಸಾಮೂಹಿಕ ಸ್ತೋತ್ರ ಪಾರಾಯಣ ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು ಹೇಳಿದರು.
ಇತ್ತೀಚೆಗೆ ಭಾರತದ ಕಾಶ್ಮೀರದ ಪಹಲ್ಗಾಮ್ ನಲ್ಲಿ #Pahalgam of Kashmir ಭಯೋತ್ಪಾದಕರ ದಾಳಿಯಿಂದ #Terrorist Attack ನೆಡೆದ ಹಿಂದುಗಳ ನರಮೇಧದ ಪ್ರತಿಕ್ರಿಯೆಯ ಭಾಗವಾಗಿ ಭಾರತ ಮತ್ತು ಭಯೋತ್ಪಾದಕ ದೇಶ ಪಾಕಿಸ್ತಾನದ ನಡುವೆ ಯುದ್ದ ಸನ್ನೀವೇಶ ಎದುರಾಗಿದ್ದು ಅಂತಹ ಸಂದರ್ಭದಲ್ಲಿ ಭಾರತದ ಸೈನಿಕರಿಗೆ ಶಕ್ತಿ, ಧೈರ್ಯ, ಸ್ಥೈರ್ಯ ಹಾಗೂ ವಿಜಯ ಲಭಿಸಲಿ ಎಂದು ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಮೂಕಾಂಬಿಕಾ ಸತ್ಸಂಗ ಬಳಗದಿಂದ ಭಾರತಮಾತೆ ಹಾಗೂ ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸಿ ಕಲ್ಯಾಣ ವೃಷ್ಠಿ ಸ್ತವ, ಶಿವ ಪಂಚಾಕ್ಷರ ಸ್ತೋತ್ರ ಹಾಗೂ ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರಗಳ ಸಾಮೂಹಿಕ ಪಾರಾಯಣ ಮಾಡಿ ಪ್ರಾರ್ಥಿಸಲಾಯಿತು.

ಸತ್ಸಂಗದ ಪ್ರಮುಖರಾದ ಶುಭಾ ಅರುಣ್ ಮಾತನಾಡಿ, ಭಾರತೀಯರೆಲ್ಲರೂ ಪ್ರತಿ ದಿನ ನಮ್ಮ ದೇಶ ಹಾಗೂ ಸೈನಿಕರಿಗಾಗಿ ಪ್ರಾರ್ಥನೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸತ್ಸಂಗದ ಪ್ರಮುಖರಾದ ಶುಭಾ ಅರುಣ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು, ಸತ್ಸಂಗ ಬಳಗದ ಸದಸ್ಯರು, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳು ಹಾಗೂ ಶ್ರೀನಗರ ಲಲಿತಾ ಸಹಸ್ರನಾಮ ಬಳಗದ ಸದಸ್ಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post