ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಪುನೀತ್ ಜಿ. ಕೂಡ್ಲೂರು |
ಭಾಜಪ ಸಾಮಾನ್ಯ ಜನರಿಗೆ ಅಚ್ಚರಿ ಎಂಬಂತೆ ಸಾಮಾನ್ಯರಲ್ಲಿ ಸಾಮಾನ್ಯರಾದ ಭಾಜಪ ನಗರಾಧ್ಯಕ್ಷರಾದ ಟಿ.ಎಸ್. ಶ್ರೀವತ್ಸರವರನ್ನು #TSSrivatsa ಕಣಕ್ಕೆ ಇಳಿಸಿದೆ. ರಾಜಕೀಯ ಲೆಕ್ಕಾಚಾರಗಳೆಲ್ಲವೂ ಬದಲಾಗಿದೆ.
ಕಡೆಯ ಹಂತದ ವರೆಗೂ ರಾಮದಾಸ್ #SARamadas ಹಾಗೂ ರಾಜೀವ್ ರವರಿಗೆ ತೀವ್ರ ಪೈಪೋಟಿ ಎಂದು ಸಾರ್ವಜನಿಕರ ಅಭಿಪ್ರಾಯವಿತ್ತು, ಬದಲಾವಣೆಯ ಸುಳಿವು ಸಿಕ್ಕಾಗಲೆ ಪ್ರತಿಸ್ಪರ್ಧಿ ರಾಜೀವ್ ರವರು ಸಾರ್ವಜನಿಕರ ಅಭಿಪ್ರಾಯ ಬದಲಾವಣೆಯ ಸಂಗ್ರಹ, ವ್ಯಕ್ತಪಡಿಸುವ ವೇದಿಕೆ ಎಲ್ಲವನ್ನೂ ನಿರ್ಮಿಸಿ ತೀವ್ರವಾಗಿ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದರು.
ಸಮಾಜದಲ್ಲಿ ರಾಮದಾಸ್ ರವರಿಗೂ, ರಾಜೀವ್ ರವರಿಗೂ ಅಭಿಪ್ರಾಯಗಳು ಶೇಖರಣೆ ಆದವು. ತಂತ್ರ ಪ್ರತಿ ತಂತ್ರ ನೆಡೆದವು, ಅವರವರ ನಾಯಕರು ಬೆಳವಣಿಗೆ ವೀಕ್ಷಿಸಿದರು. ಇಬ್ಬರೂ ಸಹ ಅವರವರ ಕಾರ್ಯಕರ್ತರ ಸೇನೆಯನ್ನೇ ಚುನಾವಣೆಗೆ ಸಿದ್ದಮಾಡಿದ್ದರು. ರಾಜೀವ್ ಅಥವಾ ರಾಮದಾಸ್ ರವರಿಗೆ ಭಾಜಪ ಟಿಕೆಟ್ ನೀಡಿದ್ದರೆ ಇಬ್ಬರ ಕಾರ್ಯಕರ್ತರು ಸಹ ಅಲ್ಲಲ್ಲಿ ಸಹಕಾರ ಅಸಹಕಾರ ನೀಡುತ್ತಿದ್ದರು, ಭಾಜಪ ಕೃಷ್ಣರಾಜ ಕ್ಷೇತ್ರ ಒಡೆದ ಮನೆಯಾಗಿಯೇ ಉಳಿಯುತ್ತಿತ್ತು. ಇಬ್ಬರೂ ಆಕಾಂಕ್ಷಿಗಳು ಸಹ ಪ್ರಬಲ ಸ್ಪರ್ಧಿಗಳು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇವರಿಬ್ಬರಲ್ಲಿ ಯಾರಿದ್ದರೂ ಸಹ ಇವರ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಅಪಪ್ರಚಾರಗಳನ್ನು ಮಾಡಿ ಜನರ ಭಾವನೆಗಳ ಬದಲಾವಣೆಗೆ ಶ್ರಮಿಸುತ್ತಿತ್ತು. ಪಕ್ಷ, ಸ್ಥಳೀಯ ನಾಯಕರು, ಸಂಸದರು ಕೃಷ್ಣರಾಜ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದೆ ಅನ್ನಿಸುತ್ತದೆ.
ಕೃಷ್ಣರಾಜ #Krishnaraja ಭಾಜಪಕ್ಕೆ ಗೆಲ್ಲುವ ಕುದುರೆ, ಆ ಕುದುರೆ ರಾಮದಾಸ್, ರಾಮದಾಸ್ ಅವರನ್ನು ಬದಲಿಸುವುದು ಪಕ್ಷಕ್ಕೆ ಸುಲಭದ ನಿರ್ಧಾರವಲ್ಲ. ಆ ನಿರ್ಧಾರವನ್ನು ಅರಗಿಸಿಕೊಳ್ಳಲು ಸಹ ಪಕ್ಷಕ್ಕೆ ರಾಮದಾಸ್ ರವರ ಸಹಾಯ ಬೇಕು ಸಹಕಾರ ಬೇಕು. ರಾಮದಾಸ್ ರವರು ಕಟ್ಟಿ ಬೆಳಸಿದ ಪಕ್ಷದಲ್ಲಿ ಸಾವಿರಾರು ಕಾರ್ಯಕರ್ತರು ಅವರೊಂದಿಗೆ ಇದ್ದರು, ಬದಲಾವಣೆಯ ಪರ್ವದಂತೆ ಕಾರ್ಯಕರ್ತರು, ಪಾಲಿಕೆ ಸದಸ್ಯರು ಇವರ ಜೊತೆಗೆ ಇದ್ದರು ಹಾಗೂ ದೂರವೂ ಹೋದರು, ಕೆಲವರನ್ನು ದೂರವೂ ಇಟ್ಟರು. ಇಂದಿನ ರಾಮದಾಸ್ ರವರ ಬೆಳವಣಿಗೆಗೆ 20-25 ವರ್ಷಗಳ ಕಾರ್ಯಕರ್ತರ ಶ್ರಮವಿದೆ, ಇಂದು ಅಧಿಕಾರದಲ್ಲಿರುವ ಹಲವರಿಗೆ ರಾಮದಾಸ್ ರವರ ಕೃಪಾಕಟಾಕ್ಷವೂ ಇದೆ.
ರಾಜೀವ್ ತಮ್ಮ ಬೆಳವಣಿಗೆಯ ಹಾದಿ ತಾವೇ ಹಿಡಿದವರು, ಯಡಿಯೂರಪ್ಪರವರ ಬೆಂಬಲಿಗರಾಗಿ ಪಕ್ಷ ಕಟ್ಟಲು ಶ್ರಮವಹಿಸಿದರು, ಪಕ್ಷದ ಕೆಲಸ ಮಾಡಿದರು. ಮೂಡಾ ಅಧ್ಯಕ್ಷರಾಗಿ ಭಾಜಪಕ್ಕೆ ಗೌರವ ತರುವ ಹಲವು ಕೆಲಸ ಮಾಡಿದರು ಕರೋನ ಕಾಲಘಟ್ಟದಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದರು. ಇಬ್ಬರೂ ಪಕ್ಷದಲ್ಲಿ ಪ್ರಭಾವಿಗಳು ಇಬ್ಬರಲ್ಲಿ ಯಾರಿಗೆ ಕೊಟ್ಟರೂ ಸಹ ಪಕ್ಷ ಒಂದಲ್ಲ ಒಂದು ನಿರಂತರ ಸಮಸ್ಯೆಗೆ ಗುರಿಯಾಗಬೇಕು ಅನ್ನಿಸಿರಬೇಕು. ಹೀಗಾಗಿ ಭಾಜಪ ಇಬ್ಬರನ್ನೂ ಹೊರೆತು ಪಡೆಸಿ ಮತ್ತೊಬ್ಬರ ಆಯ್ಕೆ ಅನಿವಾರ್ಯವಾಗಿರಬಹುದು. ಭಾಜಪದ ಸಾಮಾನ್ಯ ಕಾರ್ಯಕರ್ತರಾಗಿ ಇಂದು ಭಾಜಪ ನಗರಾಧ್ಯಕ್ಷರಾದ ಶ್ರೀವತ್ಸರವರೇ ಅವರ ಆಯ್ಕೆಯಾಗಿರಬೇಕು ಹಾಗೂ ಈ ಮೂವರು ಸಹ ಬ್ರಾಹ್ಮಣ ಸಮುದಾಯದವರು. ಬ್ರಾಹ್ಮಣರು ಹಾಗೂ ಕಾರ್ಯಕರ್ತರೇ ನಿರ್ಣಾಯಕ ಭಾಜಪ ಈ ಕ್ಷೇತ್ರದಲ್ಲಿ ಗೆಲ್ಲಲು. ನೂತನ ಪ್ರಯೋಗ ಮಾಡುತ್ತಿರುವ ಭಾಜಪಕ್ಕೆ ಕೃಷ್ಣರಾಜ ಮತ್ತೊಂದು ಪ್ರಯೋಗಶಾಲೆ ಆಗಿದೆ.
ಯಾವುದೇ ಆಪಾದನೆ, ಆರೋಪವಿಲ್ಲದ ಅಭ್ಯರ್ಥಿಯನ್ನು ಭಾಜಪ ಹುಡುಕಿ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿಸಿದೆ. ಈಗ ರಾಮದಾಸ್ ಹಾಗೂ ರಾಜೀವ್ ರವರ ಪಾತ್ರ ಮತ್ತು ಜವಾಬ್ದಾರಿ ಬಹಳ ದೊಡ್ಡದಾಗಿ ಹೊರಹೊಮ್ಮಿದೆ.
ಒಂದು ವೇಳೆ ಇಬ್ಬರಲ್ಲಿ ಯಾರೇ ಅಸಹಕಾರ ನೀಡಿದರು ಸಾರ್ವಜನಿಕರ ಎದುರು ಅವರ ಪಕ್ಷದವರಿಗೆ ಕೊಟ್ಟರು ಸಹ ಇವರು ಹೇಗೆ ಮಾಡಿದರು ನೋಡು ಅನ್ನುತ್ತಾರೆ. ಇನ್ನೂ ಕೆಲವರು ರಾಮದಾಸ್ ಅಷ್ಟೆಲ್ಲ ಮಾಡಿದ್ದರು ಅವರಿಗೆ ಟಿಕೆಟ್ ಕೊಡದೆ ಯಾರಿಗೂ ಪರಿಚಯವಿಲ್ಲದ ಶ್ರೀವತ್ಸರವರಿಗೆ ಕೊಟ್ಟಿದ್ದಾರೆ. ಅವರು ಗೆಲ್ಲಲು ಆಗುತ್ತದೆಯೇ? ರಾಜೀವ್ ಅಷ್ಟು ವರ್ಷ ಕೆಲಸ ಮಾಡಿದ್ದಾರೆ ಅವರಿಗೆ ನೀಡಬೇಕಿತ್ತು ಎಂಬ ಸಾರ್ವಜನಿಕರ ಅಭಿಪ್ರಾಯ ಸರ್ವೇ ಸಾಮಾನ್ಯ.
ಅಭ್ಯರ್ಥಿ ಘೋಷಣೆ ಆಗಿದೆ ಅಭ್ಯರ್ಥಿ ಭಾಜಪ ಅಭ್ಯರ್ಥಿ ಎಂದು ಬೆಂಬಲಿಸುವುದು ಕಾರ್ಯಕರ್ತರ ಕೆಲಸ ಎಂದು ಇಬ್ಬರೂ ನಾಯಕರು ತಮ್ಮ ಬೆಂಬಲಿಗರಿಗೆ ಹೇಳುತ್ತಾರೆಯೇ!??
ಇಷ್ಟು ವರ್ಷ ಅವರವರ ನಾಯಕರನ್ನು ನಂಬಿ ಸ್ಥಳೀಯ ವಿಚಾರದಲ್ಲಿ ಅನ್ಯ ಪಕ್ಷದೊಂದಿಗೆ ಮನಃಸ್ಥಾಪಗಳು, ಗಲಾಟೆಗಳು, ಹೋರಾಟ ಮಾಡಿಕೊಂಡು ಬಂದ ಕಾರ್ಯಕರ್ತರ ಗತಿ ಏನು!? ಈ ಎಲ್ಲಾ ಕಾರ್ಯಕರ್ತರ ಮನ ಗೆಲ್ಲುವ ಸಾಮರ್ಥ್ಯ ಶ್ರೀವತ್ಸ ಅವರಿಗೆ ಕಾರ್ಯಗತವಾಗಬೇಕು.
ರಾಮದಾಸ್ ರವರ ನಿರ್ಣಯ ಕೃಷ್ಣರಾಜ ಕ್ಷೇತ್ರದ ಭಾಜಪ ಭವಿಷ್ಯದಲ್ಲಿದೆ. ಹೊಸ ಹೊಸ ಅಭ್ಯರ್ಥಿಗಳ ಅಖಾಡ ಸಂಸದರ ಜವಾಬ್ದಾರಿ ಹೆಚ್ಚಿಸಿದೆ. ಸಂಸದರು ಬಹಳ ಚತುರರು ಇದೆಲ್ಲವನ್ನೂ ನಿಭಾಯಿಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post