ಕಲ್ಪ ಮೀಡಿಯಾ ಹೌಸ್ | ಮೈಸೂರು |
ಈ ಬಾರಿ ಚುನಾವಣೆಗೆ ಟಿಕೇಟ್ ಶ್ರೀವತ್ಸ ಅವರಿಗೆ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತನೊಬ್ಬರಿಗೆ ಅವಕಾಶವನ್ನು ಬಿಜೆಪಿ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಟಿಕೇಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ನನಗೆ ಆಗಿನ ಚುನಾವಣೆಯಲ್ಲಿ ಟಿಕೇಟ್ ಯಾರೂ ಕೊಡಿಸಿದ್ದಲ್ಲ. ಅದೇ ರೀತಿ 35 ವರ್ಷಗಳ ಕಾಲ ರಾಮದಾಸ್ ಅವರಿಗೆ ಪಕ್ಷ ಅವಕಾಶವನ್ನು ಕೊಟ್ಟಿದೆ. ಈಗ ಸಾಮಾನ್ಯ ಕಾರ್ಯಕರ್ತನೊಬ್ಬರಿಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ವರಿಷ್ಠರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಉಡುಪಿಯ ರಘುಪತಿ ಭಟ್ ಅವರಿಗೂ ಸಹ ಟಿಕೇಟ್ ದೊರೆತಿಲ್ಲ. ಆದರೆ, ಯಶ್ ಪಾಲ್ ಸುವರ್ಣ ಅವರನ್ನು ತಮ್ಮನಂತೆ ಭಾವಿಸಿ ಅವರ ಗೆಲುವಿಗಾಗಿ ಓಡಾಡುತ್ತಿದ್ದಾರೆ. ಅದೇ ರೀತಿ ರಾಮದಾಸ್ ಸಹ ಪಕ್ಷವನ್ನು ತಾಯಿ ಎಂದು ಭಾವಿಸಿದ್ದಾರೆ. ಅಲ್ಲದೇ ಅವರು ತಾಯಿಯನ್ನು ತೊರೆಯುವುದಿಲ್ಲ ಎಂಬ ನಂಬಿಕೆ ನಮಗೆ ಇದೆ. ಜೊತೆಯಲ್ಲಿ ಶ್ರೀವತ್ಸ ಸಹ ರಾಮದಾಸ್ ಅವರಿಗೆ ತಮ್ಮನಂತೆಯೇ. ಹೀಗಾಗಿ ರಘುಪತಿ ಭಟ್ ಅವರ ರೀತಿಯಲ್ಲೇ ಇವರೂ ಸಹ ಬೆಂಬಲ ನೀಡಿ ಪಕ್ಷದ ಗೆಲವುಗೆ ಸಹಕಾರ ನೀಡುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ.
ರಾಮದಾಸ್ ಅವರ ನಿವಾಸದಲ್ಲಿ ಸಭೆಯ ನಂತರ ಸಚಿವ ಸೋಮಣ್ಣ ಅವರ ನಿವಾಸಕ್ಕೆ ಪ್ರತಾಪ್ ಸಿಂಹ ಹಾಗೂ ಶ್ರೀವತ್ಸ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post