ಕಲ್ಪ ಮೀಡಿಯಾ ಹೌಸ್ | ಮೈಸೂರು |
ಈ ಬಾರಿ ಚುನಾವಣೆಗೆ ಟಿಕೇಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಕಾರ್ಯಕರ್ತರು ಹಾಗೂ ಹಿತೈಷಿಗಳ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಆನಂತರ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹಾಲಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.
ಕೃಷ್ಣರಾಜ ಕ್ಷೇತ್ರದ ಟಿಕೇಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಬೆಂಬಲ ಕೇಳುವ ಸಲುವಾಗಿ ಅವಕಾಶ ವಂಚಿತ ಹಾಲಿ ಶಾಸಕ ರಾಮದಾಸ್ ಅವರ ನಿವಾಸಕ್ಕೆ ಘೋಷಿತ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು. ಆನಂತರ ರಾಮದಾಸ್ ಈ ಸ್ಪಷ್ಟನೆ ನೀಡಿದ್ದಾರೆ.
ಪಕ್ಷ ನನಗೆ ತಾಯಿಯ ಮನೆ. ಇಂದು ತಾಯಿಯ ಮನೆಯಿಂದ ನನ್ನನ್ನು ಓಡಿಸಿದ್ದಾರೆ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ನಾಳೆ ಕಾರ್ಯಕರ್ತರ ಜೊತೆಯಲ್ಲಿ ಚರ್ಚಿಸಿ ಆನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ವಿಶೇಷ ಎಂದರೆ ಒಂದೇ ಕಡೆ ಇದ್ದರೂ ರಾಮದಾಸ್ ಹಾಗೂ ಶ್ರೀವತ್ಸ ಮುಖತಃ ಭೇಟಿಯಾಗಿ ಮಾತನಾಡದೇ ಮೊಬೈಲ್ ಮೂಲಕ ಮಾತನಾಡಿದ್ದು ಅಚ್ಚರಿ ಎನಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post