ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಮೈಸೂರು ಶಾಖೆಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರು ಜುಲೈ 13ರ ಬೆಳಗ್ಗೆ ಭಕ್ತರಿಗೆ ತಪ್ತ ಮುದ್ರಾಧಾರಣೆ ನೀಡಲಿದ್ದಾರೆ.
ಅಂದು ಬೆಳಗ್ಗೆ 7 ರಿಂದ 9:30ರವರೆಗೆ ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದ ರೋಗಮೋಚನ ಶ್ರೀ ಧನ್ವಂತರಿ ದೇವಾಲಯದಲ್ಲಿ ಮುದ್ರಾ ಧಾರಣೆ ನೆರವೇರಲಿದೆ.

Also read: ರಾಜ್ಯದಿಂದ ಕಾಶಿಗೆ ಭಾರತ್ ಗೌರವ್ ರೈಲು: ಸಚಿವೆ ಶಶಿಕಲಾ ಜೊಲ್ಲೆ
ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಉತ್ತರಾದಿ ಮಠದ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೊ:9448147459ಗೆ ಸಂಪರ್ಕಿಸಬಹುದು.











Discussion about this post