ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆ, ಮೈಸೂರು ವಿಭಾಗವು ರೈಲು ನೌಕರರು, ಅವರ ಕುಟುಂಬದ ಸದಸ್ಯರು ಹಾಗೂ ನಿವೃತ್ತರ ಆರೈಕೆಯ ಉದ್ದೇಶದಿಂದ ಅರಸೀಕೆರೆ ಆರೋಗ್ಯ ಘಟಕದಲ್ಲಿ ಒಂದು ಬಹು-ವಿಶೇಷತೆ ಆರೋಗ್ಯ ಶಿಬಿರವನ್ನು ಆಯೋಜಿಸಿತು. ನೌಕರರ ಕಲ್ಯಾಣ ಹಾಗೂ ಆರೋಗ್ಯ ತಪಾಸಣೆಗಾಗಿ ಈ ಶಿಬಿರವನ್ನು ನಡೆಸಲಾಯಿತು.
ವಿಭಿನ್ನ ವೈದ್ಯಕೀಯ ಶಾಖೆಗಳ ತಜ್ಞರು ಈ ಶಿಬಿರದಲ್ಲಿ ತಮ್ಮ ಸೇವೆಗಳನ್ನು ನೀಡಿದರು. ಡಾ. ಶಾರದಮ್ಮ – ದಂತ ತಜ್ಞೆ, ಡಾ. ಅಂಜಲಿ – ಕಣ್ಣು ತಜ್ಞೆ, ಡಾ. ವೆಂಕಟೇಶ್ – ಮೂಳೆ ತಜ್ಞರು, ಡಾ. ಜೈಶ್ರೀ – ಸ್ತ್ರೀರೋಗ ತಜ್ಞೆ, ಮತ್ತು ಡಾ. ಪ್ರಸಾದ್ – ವೈದ್ಯರು. ಇವರು ಭಾಗವಹಿಸಿದ್ದರು ಇದರಿಂದಾಗಿ ಒಂದೇ ತಾಣದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವಂತೆ ಮಾಡಿಲಾಗಿತ್ತು.
ಈ ಆರೋಗ್ಯ ಶಿಬಿರವು ನೌಕರರು, ನಿವೃತ್ತರು ಮತ್ತು ಅವರ ಅವಲಂಭಿತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ತಜ್ಞ ವೈದ್ಯರಿಂದ ಸಲಹೆ ಪಡೆಯುವ ಮತ್ತು ಆರೋಗ್ಯದ ಪರೀಕ್ಷೆಗಳಿಗೆ ಇದು ಉತ್ತಮ ಅವಕಾಶವಾಯಿತು. ಇಂತಹ ಶಿಬಿರಗಳು ಆರೋಗ್ಯ ಸಮಸ್ಯೆಗಳ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವಲ್ಲಿ ಹಾಗೂ ನಿರ್ವಹಣೆಯಲ್ಲೂ ಸಹಕಾರಿ ಆಗುತ್ತವೆ ಎಂಬುದರ ಜೊತೆಗೆ, ನೌಕರರ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತವೆ.
ನೈಋತ್ಯ ರೈಲ್ವೆ, ಮೈಸೂರು ವಿಭಾಗವು ತನ್ನ ನೌಕರರ ಆರೋಗ್ಯದ ಬಗ್ಗೆ ಅತ್ಯಧಿಕ ಮಹತ್ವ ನೀಡುತ್ತಿದೆ ಮತ್ತು ಇಂತಹ ಆರೋಗ್ಯ ಶಿಬಿರಗಳನ್ನು ನಿಯಮಿತವಾಗಿ ಆಯೋಜಿಸುವ ದಿಟ್ಟ ಧೋರಣೆಯನ್ನು ಹೊಂದಿದೆ. ನೌಕರರು ಆರೋಗ್ಯವಂತರಾಗಿದ್ದು, ಉತ್ಸಾಹದಿಂದ ಕೆಲಸ ಮಾಡುವಂತಾಗಲು ಈ ಶಿಬಿರಗಳು ಸಹಕಾರಿಯಾಗುತ್ತವೆ ಎಂಬುದು ವಿಭಾಗದ ದೃಷ್ಟಿಕೋನವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post