ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೆಂಗಳೂರಿನ ಹನುಮಂತನಗರದ ಮಾಧ್ವ ಮಂದಿರದಲ್ಲಿ ಆಚಾರ್ಯ ವಿದ್ಯಾಧಿಷ್ಠಾನಂ ಪ್ರತಿಷ್ಠಾನದ ವಾರ್ಷಿಕೋತ್ಸವದ ಅಂಗವಾಗಿ ಪಂಡಿತ ಬಾಳಗಾರು ರುಚಿರಾಚಾರ್ಯರು ಆಯೋಜಿಸಿದ್ದ ತತ್ವ ಸಂಖ್ಯಾನ ಗ್ರಂಥ ಆಧಾರಿತ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೈಸೂರಿಗೆ ಎರಡು ಬಹುಮಾನ ದೊರಕಿದೆ.
ಶ್ರೀ ಸೋಸಲೆ ವ್ಯಾಸರಾಜರ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ಬಹುಮಾನ ಪಡೆದು ನಗರಕ್ಕೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಾದ ನೀಲಕಂಠನಿಗೆ ಪ್ರಥಮ ಬಹುಮಾನ ಫಲಕ ಸಹಿತ 10, 000 ರೂ. ನಗದು ಮತ್ತು ಪ್ರಶಸ್ತಿ ಪತ್ರ, ಶ್ರೀಹರಿಗೆ ತೃತೀಯ ಬಹುಮಾನ ಫಲಕ ಸಹಿತ 3,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.
Also read: ಗಮನಿಸಿ! ಏಪ್ರಿಲ್ 5ರಂದು ಶಿವಮೊಗ್ಗದ ಈ ಎಲ್ಲಾ ಕಡೆ ಕರೆಂಟ್ ಇರಲ್ಲ
ಆಚಾರ್ಯ ಶ್ರೀ ಮಧ್ವರು ರಚಿಸಿದ 37 ಸರ್ವಮೂಲ ಗ್ರಂಥಗಳಲ್ಲಿ ತತ್ವ ಸಂಖ್ಯಾನ ‘ ವಿಶೇಷ ಕೃತಿಯಾಗಿದೆ. ಈ ಗ್ರಂಥದ ಬಗ್ಗೆ ಪರಿಚಯಾತ್ಮಕ ಜ್ಞಾನವು ಸಂಸ್ಕೃತ ,ವೇದ, ದ್ವೆÊತ ಶಾಸ್ತç ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಅನುವಾದ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಪ್ರಶ್ನೋತ್ತರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗದ ವಿದ್ಯಾಪೀಠಗಳ 16 ವರ್ಷದೊಳಗಿನ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.
ನಂತರ ನಡೆದ ವಿದ್ವತ್ ಸಭೆಯಲ್ಲಿ ಪಂಡಿತರಾದ ವರದಾಚಾರ್ಯ ಜಾಲೀಹಾಳ, ರುಚಿರಾಚಾರ್ಯ, ಬಾಳಗಾರು ವಿದಾರ್ಣವ, ನರಸಿಂಹಾಚಾರ್ಯ ಕಟ್ಟಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಇದೇ ಸಂದರ್ಭ ವಿದ್ವಾಂಸರಿAದ ಶಾಸ್ತç ಗ್ರಂಥಗಳ ಚಿಂತನ- ಮಂಥನ ಗೋಷ್ಠಿ ನಡೆಯಿತು.
ಈ ಕುರಿತಂತೆ ಮಾಹಿತಿ ನೀಡಿದ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಮಧುಸೂಧನಾಚಾರ್ಯರು, ಬೆಂಗಳೂರಿನ ಹನುಮಂತನಗರದ ಮಾಧ್ವ ಮಂದಿರದಲ್ಲಿ ಆಚಾರ್ಯ ವಿದ್ಯಾಧಿಷ್ಠಾನಂ ಪ್ರತಿಷ್ಠಾನ ಹಮ್ಮಿಕೊಂಡಿದ್ದ ತತ್ವ ಸಂಖ್ಯಾನ ಗ್ರಂಥ ಆಧಾರಿತ ಸ್ಪರ್ಧೆಯಲ್ಲಿ ಮೈಸೂರಿನ ಶ್ರೀ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ನೀಲಕಂಠ (ಪ್ರ), ಶ್ರೀಹರಿ (ತೃತೀಯ) ಬಹುಮಾನ ಪಡೆದರು.
ಪಂಡಿತರಾದ ವರದಾಚಾರ್ಯ ಜಾಲೀಹಾಳ, ರುಚಿರಾಚಾರ್ಯ, ಬಾಳಗಾರು ವಿದಾರ್ಣವ, ನರಸಿಂಹಾಚಾರ್ಯ ಕಟ್ಟಿ ಹಾಜರಿದ್ದರು ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post