ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣದ ಅತ್ಯುನ್ನತ ಕೌಶಲಗಳನ್ನು ಕಲಿಸುವುದು ಮತ್ತು ಉದ್ಯಮದ ಕ್ರಿಯಾತ್ಮಕ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್ (ತಾಂತ್ರಿಕ ಶಾಲೆ) Mysore University School of Engineering ನಿರ್ದೇಶಕ ಡಾ. ಟಿ. ಅನಂತಪದ್ಮನಾಭ ಹೇಳಿದರು.
ಮಾನಸ ಗಂಗೋತ್ರಿಯ Manasagangothri ಕ್ಯಾಂಪಸ್‌ನಲ್ಲಿ ಇನ್ಫೋಸಿಸ್ ಸಹಯೋಗದೊಂದಿಗೆ ಸ್ಕೂಲ್ ಆಫ್ ಇಂಜಿನಿಯರಿಂಗ್ ಹಮ್ಮಿಕೊಂಡಿರುವ ‘ಪಾಥ್ ವೇಸ್ ಟು ಎಕ್ಸಲೆನ್ಸ್ ’ ಶೀರ್ಷಿಕೆಯ ಸ್ಪ್ರಿಂಗ್‌ಬೋರ್ಡ್ ಇನಿಶಿಯೇಟಿವ್- ಡಿಜಿಟಲ್ ಅಪ್‌ಸ್ಕಿಲ್ಲಿಂಗ್ ಪ್ರೋಗ್ರಾಂ ಎಂಬ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಯೋಜಿತ ಪಠ್ಯಕ್ರಮವನ್ನು ಅಧ್ಯಯನ ಮಾಡುವುದರೊಂದಿಗೆ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಮತ್ತು ಸಂಶೋಧನೆಗಳತ್ತ ಗಮನ ಹರಿಸಬೇಕು. ಉತ್ತಮ ಅಂಕ ಗಳಿಸುವುದರೊಂದಿಗೆ ಕೌಶಲಗಳನ್ನೂ ರೂಢಿಸಿಕೊಂಡಾಗ ಮಾತ್ರ ವರ್ತಮಾನದ ಔದ್ಯೋಗಿಕ ರಂಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಸಮರ್ಥರಾಗುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಸ್ಕೂಲ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಗತ್ಯವಿರುವ ತರಬೇತಿಗಳನ್ನು ಆಗಾಗ್ಗೆ ಆಯೋಜನೆ ಮಾಡುವಲ್ಲಿ ವಿಶೇಷ ಆಸಕ್ತಿ ವಹಿಸಿದೆ. ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಉಪಕ್ರಮಗಳು ಮಹತ್ವದ ಮೈಲಿಗಲ್ಲಾಗಲಿವೆ ಎಂದರು.
Also read: ಕುವೆಂಪು ವಿವಿ: ಅಧಿಕಾರ ಸ್ವೀಕರಿಸಿದ ನೂತನ ಕುಲಸಚಿವ ಎ.ಎಲ್. ಮಂಜುನಾಥ್
ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವನಾಥ, ಡಾ. ಸೈಯದ್ ಸಲೀಂ, ಡಾ. ನಿತಿನ್, ಸಚಿನ್, ಸಂದೀಪ್, ಪ್ರದೀಪ್ ಬಾಬು, ಇನ್ಫೋಸಿಸ್ ಕಂಪನಿ ಸಂಪನ್ಮೂಲ ವ್ಯಕ್ತಿ ಶರೋನ್ ನಿಶ್ಚಿತಾ ಹಾಜರಿದ್ದರು.
800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆ (ಎ.ಐ )ಮತ್ತು ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್ (ಎಐಎಂಎಲ್) ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್, ಬಯೋಮೆಡಿಕಲ್ ಮತ್ತು ರೋಬೋಟಿಕ್ ಎಂಜಿನಿಯರಿಂಗ್, ಸಿವಿಲ್ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ವಿಭಾಗದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಂಡೋಪತಂಡವಾಗಿ ಭಾಗವಹಿಸಿ ತರಬೇತಿ ಕೌಶಲಗಳನ್ನು ಕಲಿಯುತ್ತಿರುವುದು ವಿಶೇಷವಾಗಿದೆ.
ಐಓಟಿ, ಮೈಕ್ರೋ ಕಂಟ್ರೋಲರ್, ಎಆರ್ ಮತ್ತು ವಿಆರ್, ತ್ರೀಡಿ ಪ್ರಿಂಟಿಂಗ್ ಟೆಕ್ನಾಲಜಿ ಮಾಡ್ಯೂಲ್‌ಗಳ ಬಗ್ಗೆ ಬೋಧನೆ ಮತ್ತು ಪ್ರಾತ್ಯಕ್ಷಿಕೆಗೆ ಮಹತ್ವ ನೀಡಲಾಗಿದೆ. ಮಾ. 16 ರ ವರೆಗೆ ತರಬೇತಿ ನಡೆಯಲಿದ್ದು, 1, 2 ಮತ್ತು 3 ನೇ ಸೆಮಿಸ್ಟಾರ್ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post