ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ ಶ್ರೀ ರಾಮಕೃಷ್ಣಾಶ್ರಮವು ಏ. 14ರಿಂದ 20ರ ವರೆಗೆ ಪ್ರೌಢಶಾಲಾ ಹಂತದ ಮಕ್ಕಳಿಗೆ ವಸಂತ ವಿಹಾರ – ಬೇಸಿಗೆ ಶಿಬಿರ #Summercamp ಆಯೋಜನೆ ಮಾಡಿದೆ.
ನಗರದ ಯಾದವಗಿರಿಯಲ್ಲಿರುವ ಆಶ್ರಮದಲ್ಲಿ ನಿತ್ಯ ಬೆಳಗ್ಗೆ 7.45ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ.
Also read: ಹೆಣದ ಮೇಲೂ ಹಣ ಮಾಡುವ ಕಾಂಗ್ರೆಸ್ | ಪ್ರತಿಪಕ್ಷ ನಾಯಕ ಆರ್. ಅಶೋಕ ವ್ಯಂಗ್ಯ
ಶಿಬಿರದಲ್ಲಿ ವ್ಯಕ್ತಿತ್ವ ನಿರ್ಮಾಣ, ಯೋಗ, ಧ್ಯಾನ, ಚಿತ್ರಕಲೆ, ಸಂವಹನ ಕೌಶಲ, ಸೃಜನಾತ್ಮಕ ಕಲಿಕೆ ಮತ್ತು ದಿವ್ಯತ್ರಯರಾದ ಶ್ರೀ ರಾಮಕೃಷ್ಣ ಪರಮಹಂಸರು, ಶಾರದಾಮಾತೆ ಮತ್ತು ಸ್ವಾಮಿ ವಿವೇಕಾನಂದರ ಸಂದೇಶ ಇತ್ಯಾದಿ ವಿಷಯಗಳ ಬಗ್ಗೆ ವಿಷಯ ತಜ್ಞರು ಸಮಗ್ರ ತರಬೇತಿ ನೀಡಲಿದ್ದಾರೆ.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದು. ವಿವರ ಮತ್ತು ಹೆಸರು ನೋಂದಣಿಗೆ 0821- 241 7444 ಅಥವಾ 241 2424 ಸಂಪರ್ಕಿಸಬಹುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post