ಕಲ್ಪ ಮೀಡಿಯಾ ಹೌಸ್ | ಮೈಸೂರು |
ತಮ್ಮ ಸರಳತೆ ಹಾಗೂ ಜನರನ್ನು ಪ್ರೀತಿಸುವ ವ್ಯಕ್ತಿತ್ವದಿಂದಲೇ ಹಿರಿಯ ಚಿತ್ರನಟ, ದಿ.ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ #ShankarAshwath ಅವರು ತಮ್ಮ ಇಳಿ ವಯಸ್ಸಿನಲ್ಲೂ ಭರಟನಾಟ್ಯದ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಶಂಕರ್ ಅಶ್ವತ್ಥ್ ಅವರ ನಿವಾಸದಲ್ಲಿ ಕೆಲವು ವಿದ್ಯಾರ್ಥಿನಿಯರು ಪಿಜಿಯಲ್ಲಿದ್ದಾರೆ. ಇವರುಗಳ ಮುಂದೆ ಭರತನಾಟ್ಯದ #Bharatanatya ಹೆಜ್ಜೆ ಹಾಕಿರುವ ಅವರು, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಅವರು `ನಮ್ಮನೆ ಪಿಜಿಯಲ್ಲಿ ಇರುವ ಇಂಜಿನಿಯರಿಂಗ್, ಸೈನ್ಸ್ ಹಾಗೂ ಆಯುರ್ವೇದಿಕ್ ಓದುತ್ತಿರುವ ಮಕ್ಕಳು ಕೆಲವರು ತಮ್ಮಲ್ಲಿರುವ ಪ್ರತಿಭೆ ತೋರಿಸಲು ನಾಚಿಕೆ, ಭಯ ಪಡುತ್ತಿದ್ದಾಗ ಅವರಿಗೆ ಆ ಚಳಿ ಬಿಡಿಸಲು’ ನೃತ್ಯ ಮಾಡಿದ್ದಾಗಿ ಹೇಳಿದ್ದಾರೆ.
ತನಗೆ 67 ವರ್ಷವಾಗಿದ್ದು, ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಹಾಗಿದ್ದೂ, ಪ್ರತಿಭೆ ತೋರುವ ಅವಕಾಶ ಸಿಕ್ಕಾಗ ಹಿಂಜರಿಯಬಾರದೆಂದು ಮಕ್ಕಳಿಗೆ ತಿಳಿಸಲು ಅವರ ಮುಂದೆ ಈ ರೀತಿ ನೃತ್ಯ ಮಾಡಿ ತೋರಿಸಿದೆ. ನಂತರದಲ್ಲಿ ಅವರೂ ಹಿಂಜರಿಕೆಯಿಂದ ಹೊರಬಂದು ಮ್ಮ ಪ್ರತಿಭೆಗಳನ್ನು ತೋರಿಸಿದರು ಎಂದಿದ್ದಾರೆ.
ಶಂಕರ್ ಅಶ್ವತ್ಥ್ ಅವರ ಈ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Discussion about this post