ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮನೆಗಳನ್ನು ಸಂಗ್ರಹವಾಗುವ ಹಸಿಕಸವನ್ನು #WetWaste ಗೊಬ್ಬರವನ್ನಾಗಿ ಪರಿವರ್ತಿಸಿ ನಿಮ್ಮ ಮನೆಯ ಗಿಡಗಳಿಗೆ ಹಾಕುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಮೈಸೂರಿನ #Mysore ಶ್ರೀರಾಂಪುರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ. ಶ್ರೀಧರ್ ಕರೆ ನೀಡಿದರು.
ಇಲ್ಲಿನ ಶ್ರೀರಾಂಪುರ ಪಟ್ಟಣ ಪಂಚಾಯ್ತಿ ಹಾಗೂ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ನಿವಾಸಿಗಳ ಹಿತರಕ್ಷಣಾ ಸಮಿತಿ ಸಹಯೋಗದೊಂದಿಗೆ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಪ್ಲಾಸ್ಟಿಕ್ #Plastic ಮುಕ್ತ ಜಾಗೃತಿ, ತ್ಯಾಜ್ಯ ನಿರ್ವಹಣೆ, #WasteManagement ಪರಿಸರ ಸಂರಕ್ಷಣೆಯ ಜಾಗೃತಿ ತರಬೇತಿ ಮತ್ತು ಅಭಿಯಾನ ಹಾಗೂ ಬಡಾವಣೆಯಲ್ಲಿ ಗಿಡಗಳನ್ನು #Plant ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀರಾಂಪುರ ಪಟ್ಟಣ ಪಂಚಾಯಿತಿಯು ತನ್ನ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕೆ ನಿವಾಸಿಗಳ ಸಂಪೂರ್ಣ ಸಹಕಾರ ಬೇಕು. ತಾವುಗಳು ಕಸವನ್ನು ಖಾಲಿ ನಿವೇಶನಗಳಲ್ಲಿ ಹಾಗೂ ರಸ್ತೆಗಳಲ್ಲಿ ಎಸೆಯದೆ ಪಟ್ಟಣ ಪಂಚಾಯಿತಿಯಿಂದ ಕಳಿಸುವ ತ್ಯಾಜ್ಯ ಸಂಗ್ರಹ #WasteCollection ವಾಹನಕ್ಕೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಹಾಕಬೇಕು ಎಂದರು.
ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ತಾವುಗಳು ಏಕ ಬಳಕೆ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ ಪರ್ಯಾಯ ವಸ್ತುಗಳನ್ನು ಬಳಸಬೇಕು. ಪಟ್ಟಣ ಪಂಚಾಯಿತಿಯು ನೀಡುತ್ತಿರುವ ಗಿಡಗಳಿಗೆ ತಮ್ಮ ಮನೆಯಲ್ಲಿ ಹಸಿಕಸಗಳನ್ನು ಶೇಖರಿಸಿ ಗೊಬ್ಬರ ಮಾಡಿ ಈ ಗಿಡಗಳಿಗೆ ಬಳಸಿದರೆ ಹಸಿಕಸಗಳನ್ನು ಮರು ಬಳಸಿದಂತೆ ಆಗುತ್ತದೆ. ಗಿಡಗಳನ್ನು ಕಾಪಾಡುವುದು ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಸದಸ್ಯರ ಜವಾಬ್ದಾರಿ ಆಗಿರುತ್ತದೆ ಎಂದರು.
ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಪರಮೇಶ್ವರ್, ಸಮುದಾಯ ಅಧಿಕಾರಿ ಶ್ರೀನಿವಾಸ್, ಕಂದಾಯ ನಿರೀಕ್ಷಕ ಬಾಲಾಜಿ, ಕರ ಸಂಗ್ರಹಗಾರ ಕುಮಾರ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ನಿರ್ದೇಶಕರಾದ ಪಿ.ಟಿ. ಮಹೇಶಪ್ಪ, ಖಜಾಂಚಿ ನಾಗರಾಜ್, ಪುನೀತ್ , ನಿರ್ಮಲ, ಶೈಲಜಾ, ಸರಸ್ವತಿ ಹಾಗೂ ತೇಜಸ್ ಹಾಜರಿದ್ದರು.
(ವರದಿ: ಪುನೀತ್ ಜಿ. ಕೂಡ್ಲೂರು, ಮೈಸೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post