ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕಷ್ಟಗಳ ನಿವಾರಣೆಗಾಗಿಯೇ ದೇವರ ಪ್ರಾರ್ಥನೆ ಸಲ್ಲಿಸುವುದರಿಂದ ಕೊಂಚ ಹೊರಬಂದು ನಾವು ಮೊದಲು ಮಾನವರಾಗಿ ಬದುಕುವಂತೆ ಜ್ಞಾನವನ್ನು ದಯಪಾಲಿಸು ಎಂದು ಬೇಡಿಕೊಳ್ಳಬೇಕು ಎಂದು ಉಡುಪಿ ಮೂಲದ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಹೇಳಿದರು.
Also Read: ಕಾರಿನಲ್ಲಿ ಸುಟ್ಟು ಕರಕಲಾದ ಪ್ರೇಮಿಗಳು: ಉಡುಪಿಯಲ್ಲೊಂದು ಭೀಕರ ಘಟನೆ
ಚಾಮರಾಜ ಜೋಡಿ ರಸ್ತೆಯ ಶ್ರೀ ವೆಂಕಟಾಚಲಧಾಮದ 11ನೆಯ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಏಕಾದಶ ಸಂವತ್ಸರೋತ್ಸವ- ಪಂಚಾಶತ್ ಕಲಶಾರಾಧನೆ, ಅಧಿವಾಸ ಹೋಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ವೆಂಕಟಾಚಲನನ್ನು ಎಲ್ಲರೂ ಕಾಂಚನ ಬ್ರಹ್ಮ ಎನ್ನುತ್ತಾರೆ. ಆತನಲ್ಲಿ ನಾವು ಕೇವಲ ಭೌತಿಕ ಸಂಪತ್ತು ಕೊಡು ಎಂದಷ್ಟೇ ಕೇಳಬಾರದು. ಶಾಶ್ವತ ಸುಖ ನೀಡುವ ಜ್ಞಾನ ದಯಪಾಲಿಸು ಎಂದು ಪ್ರಾರ್ಥನೆ ಸಲ್ಲಿಸಬೇಕು ಎಂದವರು ಸಲಹೆ ನೀಡಿದರು.
ಯಾವ ದೇಗುಲಗಳಲ್ಲಿ ಭಕ್ತಿ ಪೂರ್ವಕ ಪೂಜೆ, ಅನ್ನದಾನಾದಿಗಳು ನಡೆಯುತ್ತಿರುತ್ತವೆಯೋ ಅಲ್ಲಿ ಮಾತ್ರ ಜಾಗೃತ ಸನ್ನಿಧಿ ಇರುತ್ತದೆ. ಆಗ ಮಾತ್ರ ದೇವಸ್ಥಾನಗಳು ನೆಮ್ಮದಿ ತಾಣಗಳಾಗಲು ಸಾಧ್ಯ ಎಂದರು.

ಪ್ರಧಾನ ಅರ್ಚಕರಾದ ರಾಘವೇಂದ್ರ, ಹಿರಿಯ ವಿದ್ವಾಂಸ ಕೃಷ್ಣಕುಮಾರ್ ಆಚಾರ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post