ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಕೃತ ವಿವಿಗಳ ರಾಷ್ಟ್ರಮಟ್ಟದ 60ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ ಪ್ರಣವ ಆಚಾರ್ಯಗೆ ಪ್ರಥಮ ಬಹುಮಾನ ಸಹಿತ ಸ್ವರ್ಣ ಪದಕ ಲಭಿಸಿದೆ.
ನಗರದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಯಾದ ಪ್ರಣವ ಆಚಾರ್ಯ ನ್ಯಾಯಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ಪಂಚಲಕ್ಷಣಿ ಎಂಬ ಗ್ರಂಥದ ಆಧಾರದ ಮೇಲೆ ವಿಷಯ ಮಂಡಿಸಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ರಣವ ಆಚಾರ್ಯ 15 ರಾಜ್ಯಗಳ ಸ್ಪರ್ಧಾಳುಗಳ ಪ್ರಬಲ ಪೈಪೋಟಿ ಎದುರಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಿನ್ನದ ಪದಕ ಪಡೆಯುವ ಮೂಲಕ ಕರ್ನಾಟಕಕ್ಕೆ ಮತ್ತು ಸೋಸಲೆ ಶ್ರೀ ವ್ಯಾಸತೀರ್ಥ ಸಂಸ್ಥಾನಕ್ಕೆ ಪ್ರಣವ ಆಚಾರ್ಯ ಗೌರವ ತಂದುಕೊಟ್ಟಿದ್ದಾರೆ ಎಂದು ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post