ಕಲ್ಪ ಮೀಡಿಯಾ ಹೌಸ್ | ಮೈಸೂರು |
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಗೆ #Renukaswamy Murder Case ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದರ್ಶನ್ ಕರೆದೊಯ್ದು ಮೈಸೂರಿನಲ್ಲಿ ಪೊಲೀಸರು ಮಹಜರ್ ನಡೆಸಲಾಗುತ್ತಿದೆ.
ರೇಣುಕಾಸ್ವಾಮಿ ಮರ್ಡರ್ ಬಳಿಕ ನಟ ದರ್ಶನ್ #Actor Darshan ಮೈಸೂರಿಗೆ ತೆರಳಿದ್ದರು. ಹಾಗಾಗಿ ದರ್ಶನ್ ಸೇರಿ ಉಳಿದ ಆರೋಪಿಗಳನ್ನು ಕರೆದೊಯ್ದು ಮಹಜರ್ ನಡೆಸಲಾಗುತ್ತಿದೆ.
ಬೆಂಗಳೂರಿನ ಪಟ್ಟಣಗೆರೆ ಶೆಡ್’ನಲ್ಲಿ ಹತ್ಯೆ ಮಾಡಿ, ಸುಮನಹಳ್ಳಿ ಬಳಿ ಹೆಣ ಎಸೆಯಲಾಗಿತ್ತು. ನಂತರ ಮೈಸೂರಿನ ಖಾಸಗಿ ಹೋಟೆಲ್’ನಲ್ಲಿ ದರ್ಶನ್ ಇದ್ದರು.
Also read: ಮಡಿಕೇರಿ | ನಿರ್ಮಾಣ ಹಂತದ ತೆರೆದ ಬಾವಿಗೆ ಬಿದ್ದು ಕಾಡಾನೆ ದಾರುಣ ಸಾವು
ಖಾಸಗಿ ಹೊಟೇಲ್ ಬಳಿಯ ಜಿಮ್’ನಲ್ಲಿ ಇರುವಾಗಲೇ ಪೊಲೀಸರು ದರ್ಶನ್ ಬಂಧಿಸಲಾಗಿತ್ತು.
ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಬಳಿಕ ಫಾರ್ಮ್ ಹೌಸ್’ಗೆ ದರ್ಶನ್ ತೆರಳಿದ್ದರು. ಈ ಫಾರ್ಮ್ ಹೌಸ್ ಹಾಗೂ ಹೋಟೆಲ್’ನಲ್ಲಿ ಸ್ಥಳ ಮಹಜರ್ ನಡೆಸಲಾಗುತ್ತಿದೆ.
ಇನ್ನು ಮೈಸೂರಿನಲ್ಲಿ ದರ್ಶನ್ ಇದ್ದ ಹೋಟೆಲ್ ರೂಂ ಸೀಜ್ ಮಾಡಿರುವ ಪೊಲೀಸರು, ಎರಡು ಕಡೆ ಸ್ಥಳ ಮಹಜರು ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post