ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಟ ಅನಿರುದ್ಧ್ ಜತ್ಕರ್ Actor Anivrudh Jathkar ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ನೆರವೇರಿಸಲಾಯಿತು.
ಡಾ. ವಿಷ್ಣುವರ್ಧನ್ Dr. Vishnuvardhan ಸ್ಮಾರಕದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿಸಲಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ರಾಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ಕಾಣಿಸಿಕೊಳ್ಳಲಿದ್ದಾರೆ.
ಆನಂದ್ ರಾಜ್ ರವರು ಈ ನೂತನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೇ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ರವರು ಬರೆಯುತ್ತಿದ್ದಾರೆ. ಸರ್ವೋತ್ತಮ್ ರಾಜು ರವರು ನಿರ್ಮಾಪಕರಾಗಿದ್ದಾರೆ.
Also read: ಹರಿಪ್ರಸಾದ್ ಹೇಳಿಕೆ ಡ್ಯಾಮೇಜ್ ಕಂಟ್ರೊಲ್’ಗೆ ಡಿಕೆ ಶಿವಕುಮಾರ್ ಸಿಂಗಪುರ ಕಥೆ: ಬಸವರಾಜ ಬೊಮ್ಮಾಯಿ
ಉದಯಲೀಲಾ ರವರ ಛಾಯಾಗ್ರಹಣ, ವಿಜೇತ್ ಚಂದ್ರರವರ ಸಂಕಲನ, ರಿತ್ವಿಕ್ ಮುರಳೀಧರ್ ರವರ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ರವರ ಡಿ.ಐ. (ವಿಕ್ರಾಂತ್ ರೋಣ ಖ್ಯಾತಿ), ನರಸಿಂಹಮೂರ್ತಿ ರವರ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ರವರ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಸೌಂಡ್ ಡಿಸೈನರ್ ಆಗಿ ಬಿ.ಆರ್. ನವೀನ್ ಕುಮಾರ್ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post