ಕಲ್ಪ ಮೀಡಿಯಾ ಹೌಸ್ | ಮೈಸೂರು |
ನವರಾತ್ರಿಯ #Navarathri ಒಂಬತ್ತು ದಿನಗಳೂ ಶುಭ ಹಾಗೂ ಶ್ರೇಷ್ಠ ದಿನಗಳು. ಈ ದಿನಗಳಲ್ಲಿ ಹೊಸಕಾರ್ಯಗಳನ್ನು ಪ್ರಾರಂಭಿಸುವುದರಿಂದ ಒಳ್ಳೆಯ ಫಲ ದೊರಕುವುದು.
ಈ ದೃಷ್ಟಿಯಿಂದ ಮೈಸೂರಿನಲ್ಲಿ ನಟನತರಂಗಿಣಿಯ ವತಿಯಿಂದ ಸಂಗೀತ ಕಾರ್ಯಕ್ರಮಗಳು ಈ ವರ್ಷದ ನವರಾತ್ರಿಯಿಂದ ಪ್ರಾರಂಭವಾಗಿರುವುದು ಸಂತೋಷದ ವಿಷಯ.

ಮೈಸೂರು ಕರ್ನಾಟಕದ ಸಾಂಸ್ಕೃತಿಕ ನೆಲೆಬೀಡು. ಅತ್ಯುತ್ತಮ ಕಲಾವಿದರನ್ನು ಸಂಗೀತ ಪ್ರಪಂಚಕ್ಕೆ ನೀಡಿರುವ ಹಗ್ಗಳಿಕೆ ಈ ನಾಡಿಗೆ ಸಲ್ಲುತ್ತದೆ. ಹಾಗಾಗಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುವುದು ಅವಶ್ಯಕ.

ಕಛೇರಿಯು ಶ್ರೀ ವಿಠಲ, ಶ್ರೀ ಮುಖ್ಯ ಪ್ರಾಣ ದೇವರು ಹಾಗೂ ಶ್ರೀ ರಾಘವೇಂದ್ರ ತೀರ್ಥರ ದಿವ್ಯ ಸನ್ನಿದಾನದಲ್ಲಿ ನಡೆದುದು, ಕಲಾವಿದರ ಭಾಗ್ಯ. ಕು. ಆಬಿಜ್ಞ ದೇವರ ನಾಮಗಳನ್ನು ಉತ್ತಮ ರೀತಿಯಲ್ಲಿ ಕರ್ಣಾಟಕ ಸಂಗೀತ ಕಛೇರಿಯ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸಿದರು. ಕಲ್ಯಾಣಿ ರಾಗದ, ಶ್ರೀ ಪುರಂದರದಾಸರ ದಯಮಾಡೋರಂಗ ಕಛೇರಿಯ ಮುಖ್ಯ ಪ್ರಸ್ತುತಿ.ರಾಗದ ಆಲಾಪನೆ, ಸ್ವರ ಪ್ರಸ್ತಾರ ಸುಶ್ರಾವ್ಯವಾಗಿತ್ತು. ಶ್ರೀ ಪುರಂದರದಾಸರ ಸಕಲ ಗ್ರಹಬಲ ನೀನೆ, ನಾರಾಯಣ ನಿನ್ನ ನಾಮದ ಸ್ಮರಣೆಯ, ದೇವಿಯ ಕುರಿತಾದ ಶ್ರೀ ಮುತ್ತಯ್ಯ ಭಾಗವತರ ಕೃತಿ ಸಾರಸಮುಖಿ ಸಕಲ ಭಾಗ್ಯದೆ ಶ್ರೀ ಚಾಮುಂಡೇಶ್ವರಿ ಆಕರ್ಷಕವಾಗಿದ್ದವು. ವೈಯಲಿನ್ನಲ್ಲಿ ಶ್ರೀಲಲಿತ ಒಳ್ಳೆಯ ಸಹಕಾರ ನೀಡಿದರು. ಶ್ರೀವರ್ಚಸ್ ಮೃದಂಗದಲ್ಲಿ ತನ್ನ ಕೌಶಲವನ್ನು ತೋರಿ ಎಲ್ಲರ ಮೆಚ್ಚುಗೆಯನ್ನು ಪಡೆದನು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















Discussion about this post