ಕಲ್ಪ ಮೀಡಿಯಾ ಹೌಸ್
ಮೈಸೂರು: ರಾಜ್ಯಾದ್ಯಂತ ವಿವಿಧ ಜಿಲ್ಲೆಗಳನ್ನು ಮೈಸೂರಿನಿಂದ ಸಂಪರ್ಕಿಸಲು ಈ ಕೆಳಗಿನ ಹೆಚ್ಚುವರಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಸಂಚರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮುಖಕವಚ ಧರಿಸುವುದು, ನೈರ್ಮಲ್ಯೀಕರಣ ಇತ್ಯಾದಿಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರನ್ನು ಕೋರಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆಗಳನ್ನು ಸಹ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ವಿಶೇಷ ಎಕ್ಸ್ ಪ್ರೆಸ್ ರೈಲುಗಳ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06213 ಅರಸೀಕೆರೆಯಿಂದ ಮೈಸೂರಿಗೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್, 10.04.2021 ರಿಂದ ಪ್ರಯಾಣ ಪ್ರಾರಂಭವಾಗುತ್ತದೆ, 05.00 ಗಂಟೆಗೆ ಅರಸೀಕೆರೆಯಿಂದ ಹೊರಟು 09.25 ಗಂಟೆಗೆ ಮೈಸೂರು ತಲುಪುತ್ತದೆ.
ನಿಲ್ದಾಣದ ಪಕ್ಕದಲ್ಲಿ ತಿಳಿಸಿರುವಂತೆ ಆಗಮನ ಮತ್ತು ನಿರ್ಗಮನ ಸಮಯದೊಂದಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ರೈಲು ನಿಲುಗಡೆಗಳನ್ನು ಹೊಂದಿರುತ್ತದೆ. ಹಬ್ಬನ ಘಟ್ಟ 05.14- 05.15, ಬಾಗೇಶಪುರ 05.32 – 05.33, ಹಾಸನ 05.55-05.57, ಮಾವಿನಕೆರೆ 06.20-06.21, ಹೊಳೆನರಸೀಪುರ 06.33-06.35, ಅಣ್ಣೇಚಾಕನಹಲ್ಲಿ ಹಾಲ್ಟ್ 06.43-06.44, ಶ್ರವಣೂರು 06.48-06.49, ಮಂದಗೆರೆ 07.02-07.04, ಬೀರಹಳ್ಳಿ ಹಾಲ್ಟ್ 07.12-07.13, ಅಕ್ಕಿಹೆಬ್ಬಾಳು 07.22-07.23, ಹೊಸ ಅಗ್ರಹಾರ 07.33-07.34, ಅರ್ಜುನಹಳ್ಳಿ ಹಾಲ್ಟ್ 07.39-07.40, ಹಂಪಾಪುರ ಹಾಲ್ಟ್ 07.45-07.46, ಕೃಷ್ಣರಾಜನಗರ 08.05-08.07, ಡೋರ್ನಹಳ್ಳಿ ಹಾಲ್ಟ್ 08.12-08.13, ಸಾಗರಕಟ್ಟೆ 08.24-08.25, ಕಲ್ಲೂರು ಎಡಹಳ್ಳಿ 08.30-08.31, ಕೃಷ್ಣರಾಜಸಾಗರ 08.39-08.40, ಬೆಳಗೊಳ 08.59-09.00 ಮತ್ತು ಮೈಸೂರಿಗೆ 09.25 ಗಂಟೆಗೆ ಆಗಮಿಸುತ್ತದೆ.
ರೈಲು ಸಂಖ್ಯೆ 06214 ಮೈಸೂರಿನಿಂದ ಅರಸೀಕೆರೆಗೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲು 11.04.2021 ರಿಂದ ಪ್ರಯಾಣ ಪ್ರಾರಂಭವಾಗುವುದು. ಈ ಗಾಡಿಯು 18.20 ಗಂಟೆಗೆ ಮೈಸೂರಿನಿಂದ ಹೊರಟು 22.25 ಗಂಟೆಗೆ ಅರಸೀಕೆರೆಗೆ ಆಗಮಿಸುತ್ತದೆ.
ನಿಲ್ದಾಣದ ಪಕ್ಕದಲ್ಲಿ ಸೂಚಿಸಿರುವಂತೆ ರೈಲು ಆಗಮನ ಮತ್ತು ನಿರ್ಗಮನ ಸಮಯದೊಂದಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿರುತ್ತದೆ. ಬೆಳಗೊಳ 18.34-18.35, ಕೃಷ್ಣರಾಜಸಾಗರ 18.39-18.40, ಕಲ್ಲೂರು ಎಡಹಳ್ಳಿ 18.48-18.49, ಸಾಗರಕಟ್ಟೆ 18.55-18.56, ಡೋರ್ನಹಳ್ಳಿ ಹಾಲ್ಟ್ 19.03-19.04, ಕೃಷ್ಣರಾಜನಗರ 19.10-19.12, ಹಂಪಾಪುರ ಹಾಲ್ಟ್ 19.17-19.18, ಅರ್ಜುನಹಳ್ಳಿ ಹಾಲ್ಟ್ 19.24-19.25, ಹೊಸ ಅಗ್ರಹಾರ 19.30-19.31, ಅಕ್ಕಿಹೆಬ್ಬಾಳು 19.41-19.42, ಬೀರಹಳ್ಳಿ ಹಾಲ್ಟ್ 19.48-19.49, ಮಂದಗೆರೆ 19.58-20.00, ಶ್ರವಣೂರು 20.07-20.08, ಅಣ್ಣೇಚಾಕನಹಲ್ಲಿ ಹಾಲ್ಟ್ 20.11-20.12, ಹೊಳೆನರಸೀಪುರ 20.23-20.25, ಮಾವಿನಕೆರೆ 20.39-20.40, ಹಾಸನ 21.08-21.10, ಬಾಗೇಶಪುರ -21.32-21.33, ಹಬ್ಬನಘಟ್ಟ 21.49-21.50 ಮತ್ತು ಅರಸೀಕೆರೆಗೆ 22.25 ಗಂಟೆಗೆ ಆಗಮಿಸುತ್ತದೆ.
ಮೈಸೂರಿನಿಂದ ತಾಳಗುಪ್ಪಗೆ ರೈಲು ಗಾಡಿ ಸಂ. 06225 ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ 10.04.2021 ರಿಂದ ಪ್ರಾರಂಭವಾಗುತ್ತದೆ. ಇದು 10.15 ಗಂಟೆಗೆ ಮೈಸೂರಿನಿಂದ ಹೊರಟು 18.00 ಗಂಟೆಗೆ ತಾಳಗುಪ್ಪ ತಲುಪುತ್ತದೆ.
ಈ ರೈಲು ಪ್ರಯಾಣದ ಮಾರ್ಗ ಮಧ್ಯದಲ್ಲಿ ಕೃಷ್ಣರಾಜನಗರ, ಅಕ್ಕಿಹೆಬ್ಬಾಳು, ಬೀರಹಳ್ಳಿ ಹಾಲ್ಟ್, ಮಂದಗೆರೆ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬಾಣಾವರ, ದೇವನೂರು, ಕಡೂರು, ಬೀರೂರು, ತರಿಕೆರೆ, ಭದ್ರಾವತಿ, ಶಿವಮೊಗ್ಗ ಹಾಲ್ಟ್, ಶಿವಮೊಗ್ಗ ಟೌನ್, ಹಾರನಹಳ್ಳಿ, ಕುಂಸಿ, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ತಾಳಗುಪ್ಪದಿಂದ ಮೈಸೂರಿಗೆ ರೈಲು ಗಾಡಿ ಸಂ. 06226 ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ 11.04.2021 ರಿಂದ ಪ್ರಾರಂಭವಾಗುತ್ತದ. ಈ ರೈಲು 08.45 ಗಂಟೆಗೆ ತಾಳಗುಪ್ಪದಿಂದ ಹೊರಟು 16.50 ಗಂಟೆಗೆ ಮೈಸೂರು ತಲುಪುತ್ತದೆ.
ರೈಲು ಪ್ರಯಾಣದ ಮಾರ್ಗ ಮಧ್ಯದಲ್ಲಿ ಸಾಗರ ಜಂಬಗಾರು, ಆನಂದಪುರಂ, ಕುಂಸಿ, ಹಾರನಹಳ್ಳಿ, ಶಿವಮೊಗ್ಗ ಟೌನ್, ಶಿವಮೊಗ್ಗ ಹಾಲ್ಟ್, ಭದ್ರಾವತಿ, ತರಿಕೆರೆ, ಬೀರೂರು, ಕಡೂರು, ದೇವನೂರು, ಬಾಣಾವರ, ಅರಸೀಕೆರೆ, ಹಾಸನ, ಹೊಳೆನರಸೀಪುರ, ಮಂದಗೆರೆ, ಬೀರಹಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು ಮತ್ತು ಕೃಷ್ಣರಾಜನಗರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ರೈಲು ಸಂಖ್ಯೆ 07326 ಮೈಸೂರಿನಿಂದ ಬೆಳಗಾವಿಗೆ ಭಾಗಶಃ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ, (ಕೆ.ಎಸ್.ಆರ್. ಬೆಂಗಳೂರು, ತುಮಕೂರು ಮತ್ತು ಅರಸೀಕೆರೆ, ಹುಬ್ಬಳ್ಳಿ ಮಾರ್ಗವಾಗಿ), 10.04.2021 ರಿಂದ ಪ್ರಾರಂಭವಾಗುತ್ತದೆ. ಈ ರೈಲು 05.50 ಗಂಟೆಗೆ ಮೈಸೂರಿನಿಂದ ಹೊರಟು 21.35 ಗಂಟೆಗೆ ಬೆಳಗಾವಿಗೆ ಆಗಮಿಸುತ್ತದೆ.
ಮೈಸೂರಿನಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ರೈಲು ಗಾಡಿ ಸಂಖ್ಯೆ 17326 ವಿಶ್ವಮಾನವ ಎಕ್ಸ್‌ಪ್ರೆಸ್‌ನ ಪೂರ್ವ ಕೋವಿಡ್ ವೇಳಾಪಟ್ಟಿ ಮತ್ತು ನಿಲುಗಡೆಗಳ ಪ್ರಕಾರ ರೈಲು ಚಲಿಸುತ್ತದೆ.
ರೈಲು ಸಂಖ್ಯೆ 07325 ಬೆಳಗಾವಿಯಿಂದ ಮೈಸೂರು (ಹುಬ್ಬಳ್ಳಿ, ಅರಸೀಕೆರೆ, ತುಮಕೂರು ಮತ್ತು ಕೆ.ಎಸ್.ಆರ್. ಬೆಂಗಳೂರು ಮಾರ್ಗವಾಗಿ) 11.04.2021 ರಿಂದ ಪ್ರಾರಂಭವಾಗುವ ಭಾಗಶಃ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ಸೇವೆಯ ಪ್ರಯಾಣವು 05.20 ಗಂಟೆಗೆ ಬೆಳಗಾವಿಯಿಂದ ಹೊರಟು 20.40 ಕ್ಕೆ ಮೈಸೂರು ತಲುಪುತ್ತದೆ.
ಬೆಳಗಾವಿಯಿಂದ ಮೈಸೂರಿಗೆ ಸಂಚರಿಸುತ್ತಿದ್ದ ರೈಲು ಗಾಡಿ ಸಂಖ್ಯೆ 17325 ವಿಶ್ವಮಾನವ ಎಕ್ಸ್‌ಪ್ರೆಸ್‌ನ ಪೂರ್ವ ಕೋವಿಡ್ ವೇಳಾಪಟ್ಟಿ ಮತ್ತು ನಿಲುಗಡೆಗಳ ಪ್ರಕಾರ ರೈಲು ಚಲಿಸುತ್ತದೆ.
ರಸ್ತೆ ಸಾರಿಗೆ ನಿಗಮದ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಈ ಕೆಳಗಿನ ವಿಷೇಶ ಎಕ್ಸ್ ಪ್ರೆಸ್ ರೈಲು ಸೇವೆಗಳನ್ನು ನೀಡಲು ತೀರ್ಮನಿಸಿದೆ. ಎಲಾ ರೈಲುಗಳು ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿದ್ದೂ, ಇವುಗಳಿಗೆ ವಿಷೇಶ ದರಗಳು ಅನ್ವಯಿಸುತ್ತವೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಗಾಡಿ ಸಂ. | ನಿಲ್ದಾಣದಿಂದ | ನಿಲ್ದಾಣವರೆಗೆ | ಸೇವೆಯ ದಿನಾಂಕ | ಮಾರ್ಗ ಮಧ್ಯದ ನಿಲುಗಡೆಗಳು |
06553
(3ದಿನ) |
ಮೈಸೂರು
ನಿರ್ಗಮನ- 14.30 ಗಂಟೆಗೆ |
ಕೆಎಸ್ಆರ್ ಬೆಂಗಳೂರು
ಆಗಮನ- 17.10 ಗಂಟೆಗೆ |
09.04.21
10.04.21 14.04.21 |
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಬಿಡದಿ ಮತ್ತು ಕೆಂಗೇರಿ |
06554
(3ದಿನ) |
ಕೆಎಸ್ಆರ್ ಬೆಂಗಳೂರು
ನಿರ್ಗಮನ- 10.30 ಗಂಟೆಗೆ |
ಮೈಸೂರು
ಆಗಮನ- 13.30 ಗಂಟೆಗೆ |
09.04.21
10.04.21 14.04.21 |
ಕೆಂಗೇರಿ, ಬಿಡದಿ, ರಾಮನಗರಂ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ |
06555
(3ದಿನ) |
ಮೈಸೂರು
ನಿರ್ಗಮನ- 08.25 ಗಂಟೆಗೆ |
ಯಶವಂತಪುರ
ಆಗಮನ- 11.20 ಗಂಟೆಗೆ |
09.04.21
10.04.21 14.04.21 |
ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಬಿಡದಿ, ಕೆಂಗೇರಿ ಮತ್ತು ಕೆ.ಎಸ್.ಆರ್. ಬೆಂಗಳೂರು |
06556
(3ದಿನ) |
ಯಶವಂತಪುರ
ನಿರ್ಗಮನ- 13.15 ಗಂಟೆಗೆ |
ಮೈಸೂರು
ಆಗಮನ- 16.00 ಗಂಟೆಗೆ) |
09.04.21
10.04.21 14.04.21 |
ಕೆ.ಎಸ್.ಆರ್. ಬೆಂಗಳೂರು, ಕೆಂಗೇರಿ, ಬಿಡದಿ, ರಾಮನಗರಂ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ |
06215 | ಮೈಸೂರು
ನಿರ್ಗಮನ-20.00 ಗಂಟೆಗೆ
|
ಬೀದರ್
ಆಗಮನ- 12.00 (ಮರು ದಿನ) |
09.04.21 | ಮೈಸೂರು, ಮಂಡ್ಯ, ಕೆಂಗೇರಿ, ಕೆ.ಎಸ್.ಆರ್. ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಳಹಂಕ, ಧರ್ಮಾವರಂ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರ, ವಾಡಿ, ಕಲಬುರಗಿ ಮತ್ತು ಬೀದರ್ |
06216 | ಬೀದರ್
ನಿರ್ಗಮನ-14.00 ಗಂಟೆಗೆ |
ಮೈಸೂರು
ಆಗಮನ- 8.00 ಗಂಟೆಗೆ (ಮರು ದಿನ) |
10.04.21 | ಬೀದರ್, ಕಲಬುರಗಿ, ವಾಡಿ, ಯಾದಗಿರ, ಕೃಷ್ಣ, ರಾಯಚೂರು, ಗುಂತಕಲ್, ಧರ್ಮಾವರಂ, ಯಳಹಂಕ, ಬೆಂಗಳೂರು ಕಂಟೋನ್ಮೆಂಟ್, ಕೆ.ಎಸ್.ಆರ್. ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯ |
06511 | ಯಶವಂತಪುರ
ನಿರ್ಗಮನ-23.15 ಗಂಟೆಗೆ |
ಶಿವಮೊಗ್ಗ ಟೌನ್
ಆಗಮನ- 06.00 ಗಂಟೆಗೆ (ಮರು ದಿನ0 |
09.04.21 | ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿ |
06512 | ಶಿವಮೊಗ್ಗ ಟೌನ್
ನಿರ್ಗಮನ-9.00 ಗಂಟೆಗೆ |
ಕೆಎಸ್ಆರ್ ಬೆಂಗಳೂರು
ಆಗಮನ- 16.15 ಗಂಟೆಗೆ |
10.04.21 | ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮತ್ತು ಯಶವಂತಪುರ. |
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post