ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಂಕ್ರಾಂತಿ / ಪೊಂಗಲ್ ಹಬ್ಬದ #Sankranti/Pongal Festival ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿವಾರಿಸುವ ಉದ್ದೇಶದಿಂದ, ನೈರುತ್ಯ ರೈಲ್ವೆಯು ಮೈಸೂರು ಮತ್ತು ಟುಟಿಕೊರಿನ್ ನಡುವಾಗಿ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು #Mysore – Tuticorin Special Train ಸಂಚರಿಸಲು ತೀರ್ಮಾನಿಸಿದೆ.
ರೈಲು ಸಂಖ್ಯೆ 06283 ಮೈಸೂರು – ಟುಟಿಕೊರಿನ್ ಎಕ್ಸ್‌ಪ್ರೆಸ್ ವಿಶೇಷ ಈ ರೈಲು ಶುಕ್ರವಾರ ಮತ್ತು ಮಂಗಳವಾರ ಸಂಜೆ 18:35 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ ದಿನ ಬೆಳಿಗ್ಗೆ 11:00 ಗಂಟೆಗೆ ಟುಟಿಕೊರಿನ್ ತಲುಪಲಿದೆ.
ರೈಲು ಸಂಖ್ಯೆ 06284 ಟುಟಿಕೊರಿನ್ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ಶನಿವಾರ ಮತ್ತು ಬುಧವಾರ ಮಧ್ಯಾಹ್ನ 14:00 ಗಂಟೆಗೆ ಟುಟಿಕೊರಿನ್ ನಿಂದ ಹೊರಟು, ಮರುದಿನ ದಿನ ಬೆಳಿಗ್ಗೆ 07:45 ಗಂಟೆಗೆ ಮೈಸೂರು ತಲುಪಲಿದೆ.
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಕೆಂಗೇರಿ, ಕೆಎಸ್‌ಆð ಬೆಂಗಳೂರು, ಬೆಂಗಳೂರು ಕ್ಯಾಂಟೋನ್ಮೆಂಟ್, ಹೊಸೂರು, ಧರ್ಮಪುರಿ, ಸೇಲಂ ಜಂಕ್ಷನ್, ನಮಕ್ಕಲ್, ಕರೂರು ಜಂಕ್ಷನ್, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ವಿರುಧುನಗರ ಜಂಕ್ಷನ್, ಸತೂರು, ಕೊವಿಲ್ಪಟ್ಟಿ ಮತ್ತು ಟುಟಿಮೇರ್ಲೂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಈ ರೈಲು ಒಟ್ಟು 19 ಕೋಚ್‌ಗಳನ್ನು ಹೊಂದಿದ್ದು, ಅವುಗಳಲ್ಲಿ: ಎಸಿ ಟು ಟೈರ್ಯ – 03, ಎಸಿ ತ್ರಿ ಟೈರ್ಯ – 06, ಸ್ಲೀಪರ್ ಕ್ಲಾಸ್ – 08, ಎಸ್‌ಎಲ್‌ಆರ್/ಡಿ – 02.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















