ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ಒಂದೆಡೆ ದೇಶದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಜನರ ಬದುಕು ಹಾಗೂ ಸರ್ಕಾರಿ ನೌಕರರನ್ನೂ ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ವೇಳೆಯಲ್ಲಿ ಸದ್ದಿಲ್ಲದೇ ಮೈಸೂರಿನ ವಿದ್ಯಾಸ್ಪಂದನ ಸಂಸ್ಥೆ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ.
ಕೇಂದ್ರ ರೇಷ್ಮೆ ಮಂಡಳಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಾಗೂ ನೌಕರರಿಗೆ ವಿದ್ಯಾಸ್ಪಂದನ ಸಂಸ್ಥೆ ವತಿಯಿಂದ ಮಾಸ್ಕ್’ಗಳನ್ನು ನೀಡಲಾಯಿತು.
ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರಾದ ಡಾ. ಪಂಕಜ್ ತಿವಾರಿ ಯವರಿಗೆ ಹಸ್ತಾಂತರಿಸಿ ತಮ್ಮ ಸಂಸ್ಥೆಯ ನೌಕರರು ಹಾಗೂ ಕಾರ್ಮಿಕರಿಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಅವಶ್ಯಕತೆಗಳ ಬಗ್ಗೆ ವಿದ್ಯಾಸಂದನ ಸಂಸ್ಥೆಯ ಅಧ್ಯಕ್ಷರಾದ ಪುನೀತ್ ಜಿ ವಿವರಿಸಿದರು.
ಈ ಸಂದರ್ಭದಲ್ಲಿ ವಿದ್ಯಾಸ್ಪಂದನದ ಕಾರ್ಯದರ್ಶಿ ಅಶ್ವಿನ್ ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಡಾ.ಶಿವಕುಮಾರ್ ಹುಕ್ಕೇರಿ, ಡಾ. ಮಂದಿರಮೂರ್ತಿ, ಕೆ.ಆರ್. ಗಣೇಶ್ ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post