ಮೈಸೂರು: ಇಲ್ಲಿನ ಪ್ರಖ್ಯಾತ ಸಮಾಜಮುಖಿ ವಿದ್ಯಾಸ್ಪಂದನ ಸಂಸ್ಥೆ ತನ್ನ 5ನೆಯ ವಾರ್ಷಿಕೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡಿತು.
ಚಾಮರಾಜನಗರದಲ್ಲಿರುವ ಜೆಎಸ್‌ಎಸ್ ಅನಾಥಾಲಯಕ್ಕೆ ಅಗತ್ಯವಾಗಿರುವ ಅಡುಗೆ ಸಲಕರಣೆಗಳಾದ ಮಿಕ್ಸಿ, ಗ್ರೈಂಡರ್, ಇಡ್ಲಿ ಪಾತ್ರೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಇರುವ ಪರೀಕ್ಷೆಗಳು ಹಾಗೂ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ಮಾತನಾಡಿದ ಇನ್ಫೋಸಿಸ್ ಸಂಸ್ಥೆಯ ಶಿವಾನಂದ್ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯ ಪ್ರಾಮುಖ್ಯತೆ ಹಾಗೂ ಅದರ ಅನಿವಾರ್ಯತೆಯ ಬಗ್ಗೆ ವಿವರಿಸಿದರು.
ಬರಹಗಾರ ಲಕ್ಷ್ಮೀ ನರಸಿಂಹ ಮಾತನಾಡಿ ಜೆಎಸ್‌ಎಸ್ ಸಂಸ್ಥೆ ಚಾಮರಾಜನಗರ ಭಾಗಕ್ಕೆ ನೀಡಿರುವ ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದರು.

ಜೆಎಸ್‌ಎಸ್ ಅಕ್ಷರದಾಸೋಹ ಅಧ್ಯಕ್ಷರಾದ ಕುಮಾರಸ್ವಾಮಿ ಮಾತನಾಡಿ ಮಕ್ಕಳಿಗೆ ಪೌಷ್ಟಿಕ ಆಹಾರದ ಅವಶ್ಯಕತೆಯ ಬಗ್ಗೆ ಮಾತನಾಡಿದರು.
ದಾನಿಗಳಾದ ಕೆ.ಎನ್. ಅಶ್ವಿನ್, ವೇದಾವತಿ ಹುಕ್ಕೇರಿ, ಶಿವಾನಂದ್ ಅವರನ್ನು ಈ ಸಂದರ್ಭದಲ್ಲಿ ವಿದ್ಯಾಸ್ಪಂದನ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.















