ಕಲ್ಪ ಮೀಡಿಯಾ ಹೌಸ್
ಮೈಸೂರು: ನಗರದ ಪ್ರತಿಭೆ ವೇದಿಕೆಯಿಂದ ಆಯೋಜಿಸಲಾಗಿದ್ದ ಮನೆಮನಗಳಲ್ಲಿ ಶ್ರೀ ಶಂಕರಾಚಾರ್ಯರು ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಇಂದುಮತಿ ರತ್ನಂ ಅವರು ಪ್ರಾರ್ಥನೆ ಮಾಡುವುದರ ಮೂಲಕ ಚಾಲನೆ ನೀಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಎಸ್. ನರಸಿಂಹಮೂರ್ತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಪ್ರವಚನಕಾರರಾದ ಪುನೀತ್ ಜಿ. ಕೂಡ್ಲೂರು ಅವರು ಶ್ರೀ ಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಸುಬ್ರಹ್ಮಣ್ಯ ಭಾಗವಹಿಸಿದ್ದರು. ವೇದಿಕೆ ಉಪಾಧ್ಯಕ್ಷರಾದ ಎಸ್. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭೆ ವೇದಿಕೆ ವತಿಯಿಂದ ಪುನೀತ್ ಕೂಡ್ಲೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ್, ಸರಸ್ವತಿ, ಗಣೇಶ ಕೂಡ್ಲೂರು, ಕ್ಷಮಾ, ಹೇಮಾ, ಮಂಜುನಾಥ, ಗೀತಾ, ಶ್ರೀನಿವಾಸ, ವೀಣಾ, ಮುರುಡಿ, ಚಂದ್ರಶೇಖರ, ಪೂಜಾ ಪುನೀತ್, ಗೌರಮ್ಮ, ನಾಗಲಕ್ಷ್ಮಿ ನಾಗೇಂದ್ರ, ವಿದ್ಯಾ, ಶ್ರೀನಿಧಿ , ಕು. ಅಶ್ವಿನಿ, ಮಾ. ಪೃಥು ಮತ್ತು ಮಾ. ವೆಂಕಟರಾಘವ ಮುಂತಾದವರು ಭಾಗವಹಿಸಿದ್ದರು. ವೇದಿಕೆ ಅಧ್ಯಕ್ಷರಾದ ಎಸ್. ರಾಜರತ್ನಂ ಎಲ್ಲರನ್ನೂ ಸ್ವಾಗತಿಸಿದರು,
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















