ಭದ್ರಾವತಿ: ಸಾಧಿಸುವ ಛಲವೊಂದಿದ್ದರೆ ಗುರಿ ತಲುಪುಲು ಯಾವುದೇ ದೈಹಿಕ ಕೊರತೆಗಳು ಅಡ್ಡಬರುವುದಿಲ್ಲ ಎಂಬುದಕ್ಕೆ ಉಕ್ಕಿನ ನಗರಿಯ ಈ ಬಾಲಕಿ ಸಾಕ್ಷಿಯಾಗಿದ್ದಾಳೆ.
ಹೌದು… ಕಳೆದ ವರ್ಷ ಶಾಲಾ ವಿದ್ಯಾರ್ಥಿಗಳು ಪ್ರವಾಸ ತೆರಳಿದ ಸಂದರ್ಭದಲ್ಲಿ ಎನ್.ಆರ್.ಪುರ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲಿ ಸಾವಾಗಿ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ತೀವ್ರವಾದ ಕೈ ಕಾಲು ಜಖಂ ಆಗಿತ್ತು. ಆ ವಿದ್ಯಾರ್ಥಿಗಳು ನೋವಿನಲ್ಲೂ ಸಾಧಿಸಬೇಕೆಂದು ಹಂಬಲಹೊತ್ತು ಛಲ ಬಿಡದೆ ವ್ಯಾಸಂಗ ಮಾಡಿ ಸಹಾಯಕರೊಂದಿಗೆ ಪರೀಕ್ಷೆ ಬರೆದ ವಿಕ್ರಂ ಪಟೇಲ್ 617 ಶೇ: 98.05 ಮತ್ತು ನಂದಿನಿ 600 ಅಂಕ ಪಡೆದು ಶೇ. 96 ಫಲಿತಾಂಶ ಸಾಧಿಸಿದ್ದು ಹೆಗ್ಗಳಿಕೆಯಾಗಿದೆ.
ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡರೂ ಛಲ ಬಿಡದೇ ಹಗಲುರಾತ್ರಿ ಅಭ್ಯಾಸ ಮಾಡಿ, ಸಹಾಯಕರ ಮೂಲಕ ಪರೀಕ್ಷೆ ಬರೆದ ನಂದಿನಿ ಶೇ.96ರಷ್ಟು ಫಲಿತಾಂಶ ಪಡೆದಿರುವುದು ಇಡಿಯ ಭದ್ರಾವತಿಯೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post