ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು: ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಲಿಲ್ಲ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಪೆಟ್ರೋಲ್ ಬಂಕನ್ನೇ ಸುಟ್ಟು ಹಾಕುತ್ತೇನೆ ಎಂದು ದರ್ಪ ಮೆರೆದ ನಂಜನಗೂಡು ಎಸ್’ಐ ಯಾಸ್ಮಿನ್ ತಾಜ್ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ನಂಜನಗೂಡಿನ ಹುಲ್ಲಹಳ್ಳಿ ಸರ್ಕಲ್’ನಲ್ಲಿರುವ ಪೆಟ್ರೋಲ್ ಬಂಕ್’ನಲ್ಲಿ ಘಟನೆ ನಡೆದಿದ್ದು, ಪೆಟ್ರೋಲ್ ಹಾಕಿಲಿಲ್ಲ ಎಂಬ ಕಾರಣಕ್ಕಾಗಿ ರಂಪಾಟ ಮಾಡಿದ್ದಾರೆ.
ಬಂಕ್ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಪೆಟ್ರೋಲ್ ಬಂಕನ್ನೇ ಸುಟ್ಟು ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದಲ್ಲದೇ ಬಂಕನ್ನು ಸೀಜ್ ಮಾಡಲು ಮುಂದಾಗಿದ್ದರು.
ನನ್ನ ಸ್ಟೇಷನ್’ಗೆ ಬಂದು ಜೀಪ್ ತೆಗೆದುಕೊಂಡು ಹೋಗಿ ಡೀಸೆಲ್ ಹಾಕಬೇಕು. ಇಲ್ಲ ಅಂದರೆ ಬೇರೆಯವರಿಗೆ ಅದು ಹೇಗೆ ಡೀಸೆಲ್ ಹಾಕ್ತೀಯ ನೋಡಿಕೊಳ್ತೇನೆ ಎಂದರಲ್ಲದೇ, ಡೀಸೆಲ್ ಹಾಕಿಸಲು ಬಂದಿದ್ದ ಟೆಲಿಕಾಂ ಇಲಾಖೆ ವಾಹನ ಚಾಲಕನಿಗೆ ಲಾಠಿ ಏಟು ನೀಡಿದ್ದಾರೆ.
ಇನ್ನು, ಈ ಕುರಿತಂತೆ ಕ್ರಮ ಕೈಗೊಂಡಿರುವ ಎಸ್’ಪಿ ರಿಷ್ಯಂತ್ ಅವರು, ಯಾಸ್ಮಿನ್ ತಾಜ್ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
Get in Touch With Us info@kalpa.news Whatsapp: 9481252093
















