ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ವೀಸಾ ನಿಯಮ ಉಲ್ಲಂಘಿಸಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಸಭೆ ಸೇರಿಸಿ, ಕೊರೋನಾ ವೈರಸ್ ಹರಡಲು ಕಾರಣರಾದ ಇಂಡೋನೇಷ್ಯಾದ ತಬ್ಲಿಘಿ ಜಮಾಅತ್’ನ 800 ಬೋಧಕರನ್ನು ಕೇಂದ್ರ ಸರ್ಕಾರ ಬ್ಲಾಕ್ ಲಿಸ್ಟ್’ಗೆ ಸೇರಿಸಲು ನಿರ್ಧರಿಸಿದೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಕಠಿಣ ನಿರ್ಣಯ ಕೈಗೊಂಡಿದ್ದು, ಇಂಡೊನೇಷ್ಯಾದ ಇವರೆಲ್ಲಾ ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಇಂಡೊನೇಷ್ಯಾದಿಂದ ಈ ಎಲ್ಲಾ ಬೋಧಕರು ಪ್ರವಾಸಿ ವೀಸಾದ ಅಡಿಯಲ್ಲಿ ಭಾರತಕ್ಕೆ ಬಂದಿದ್ದು ಮೂರು ದಿನಗಳ ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು. ಆದರೆ, ಇಲ್ಲಿನ ಲಾಕ್ ಡೌನ್ ಉಲ್ಲಂಘಿಸಿ ಸಭೆ ನಡೆಸಿದ್ದು, ಇದು ಕೊರೋನಾ ವೈರಸ್ ಹರಡಲು ಕಾರಣವಾಗಿದೆ.
ವರದಿಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಘಿ ಜಮಾಅತ್‌ನ ಪ್ರಧಾನ ಕಚೇರಿಯಾದ ಅಲಾಮಿ ಮಾರ್ಕಾಜ್ ಬಂಗ್ಲೆವಾಲಿ ಮಸೀದಿಯಲ್ಲಿ ನಡೆದ ಸಭೆಯಲ್ಲಿ ದೇಶದಾದ್ಯಂತ ಸುಮಾರು 8,000 ಜನರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post