ಕಲ್ಪ ಮೀಡಿಯಾ ಹೌಸ್ | ಮೈಸೂರು |
ರೈಲ್ವೆ ರಕ್ಷಣಾ ಪಡೆ (RPF) ಮೈಸೂರು ಘಟಕವು ಆಪರೇಷನ್ “ಅಮಾನತ್” Operation ‘Amanat’ ಅಡಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ, ಅದರ ಮಾಲೀಕರಿಗೆ ಯಶಸ್ವಿಯಾಗಿ ಹಿಂತಿರುಗಿಸಿದೆ.
ರೈಲು ಸಂಖ್ಯೆ 16591 ಎಕ್ಸ್‌ಪ್ರೆಸ್‌ನಲ್ಲಿ ಗುಂತಕಲ್‌ನಿಂದ ಮಂಡ್ಯವರೆಗೆ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ತಮ್ಮ ವಿವೊ V23 ಮೊಬೈಲ್ ಕಳೆದುಕೊಂಡಿರುವ ಬಗ್ಗೆ Rail Madad ಮೂಲಕ ದೂರು ನೀಡಿದ್ದರು.
ದೂರು ಆಧರಿಸಿ RPF ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಮೊಬೈಲ್ ಅನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಂಡರು. ನಂತರ ದೂರುದಾರರಾದ ದಿಲೀಪ್ ಕುಮಾರ್ ರೆಡ್ಡಿ (46), ಆಂಧ್ರ ಪ್ರದೇಶ ಅವರನ್ನು ಸಂಪರ್ಕಿಸಿ, ಗುರುತು ಪರಿಶೀಲಿಸಿ ಸುಮಾರು ₹20,000 ಮೌಲ್ಯದ ಮೊಬೈಲ್ ಅನ್ನು ಹಸ್ತಾಂತರಿಸಿದರು.
Also read: ಯೋಗಿ ಜೀ, ನಮ್ಮನ್ನು ಕ್ಷಮಿಸಿ | 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಶರಣಾಗತಿ: ‘ಜಿರೋ ಟಾಲರೆನ್ಸ್’ ಎಫೆಕ್ಟ್
ಮೊಬೈಲ್ ಮರಳಿ ಪಡೆದ ಪ್ರಯಾಣಿಕರು RPF ಸಿಬ್ಬಂದಿಯ ತ್ವರಿತ ಸೇವೆಯನ್ನು ಶ್ಲಾಘಿಸಿದ್ದಾರೆ.
ಪ್ರಯಾಣಿಕರಿಗೆ ಸೂಚನೆ:
ರೈಲಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ತಕ್ಷಣ ರೈಲ್ವೆ ಸಿಬ್ಬಂದಿ ಅಥವಾ 139 / 182 ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಪಡೆದ ಪ್ರಯಾಣಿಕರು RPF ಸಿಬ್ಬಂದಿಯ ತ್ವರಿತ ಸೇವೆಯನ್ನು ಶ್ಲಾಘಿಸಿದ್ದಾರೆ.
ಪ್ರಯಾಣಿಕರಿಗೆ ಸೂಚನೆ:
ರೈಲಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ತಕ್ಷಣ ರೈಲ್ವೆ ಸಿಬ್ಬಂದಿ ಅಥವಾ 139 / 182 ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 1