ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೊಂಕಣ ರೈಲ್ವೆ Konkana Railway ಮಾರ್ಗದಲ್ಲಿ ಮುಂಗಾರು ಮಳೆಯ ಹಿನ್ನೆಲೆ ರೈಲುಗಳ ಸುರಕ್ಷಿತ ಸಂಚಾರಕ್ಕೆ ಒತ್ತು ನೀಡಲಾಗಿದ್ದು, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮಹತ್ವದ ಕ್ರಮವಾಗಿ ಮುಂಗಾರು ವೇಳಾಪಟ್ಟಿಯನ್ನು ಜಾರಿಗೆ ತಂದಿದೆ. ಈ ಪರಿಷ್ಕೃತ ವೇಳಾಪಟ್ಟಿ 2026ರ ಜೂನ್ 15ರಿಂದ ಅಕ್ಟೋಬರ್ 20ರವರೆಗೆ ಅನ್ವಯವಾಗಲಿದೆ.
ವೇಗ ನಿಯಂತ್ರಣ, ವೇಳಾಪಟ್ಟಿಯಲ್ಲಿ ಬದಲಾವಣೆ
ಮುಂಗಾರು ಅವಧಿಯಲ್ಲಿ ಭಾರಿ ಮಳೆ, ಭೂ ಕುಸಿತ ಮತ್ತು ಹಳಿ ಮೇಲಿನ ನೀರಿನ ಹರಿವು ಮುಂತಾದ ಪರಿಸ್ಥಿತಿಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ, ಕೊಂಕಣ ಮಾರ್ಗದಲ್ಲಿ ರೈಲುಗಳ ವೇಗಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ವಿವಿಧ ನಿಲ್ದಾಣಗಳಲ್ಲಿ ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ.
ಜೂನ್ 15, 2026 ಅಥವಾ ಅದರ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲುಗಳಿಗೆ ಈ ವೇಳಾಪಟ್ಟಿ ಅನ್ವಯವಾಗಲಿದೆ.
Also read: ಆಪರೇಷನ್ ‘ಅಮಾನತ್’: ಕಳೆದುಹೋದ ಮೊಬೈಲ್ ಪತ್ತೆ | ಮಾಲೀಕರಿಗೆ ಹಸ್ತಾಂತರ
ಈ ರೈಲುಗಳಿಗೆ ಅನ್ವಯ
ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ಈ ಕೆಳಗಿನ ಪ್ರಮುಖ ರೈಲುಗಳಿಗೆ ಮುಂಗಾರು ವೇಳಾಪಟ್ಟಿ ಅನ್ವಯವಾಗಲಿದೆ:
- 16595 / 16596 – ಕೆಎಸ್‌ಆರ್ ಬೆಂಗಳೂರು – ಕಾರವಾರ ಡೈಲಿ ಎಕ್ಸ್‌ಪ್ರೆಸ್
- 16585 / 16586 – ಎಸ್‌ಎಂವಿಟಿ ಬೆಂಗಳೂರು – ಮುರ್ಡೇಶ್ವರ ಡೈಲಿ ಎಕ್ಸ್‌ಪ್ರೆಸ್
- 16515 / 16516 – ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್
- 12741 / 12742 – ವಾಸ್ಕೋ ಡ ಗಾಮಾ – ಪಾಟ್ನಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
- 11097 / 11098 – ಪುಣೆ – ಎರ್ನಾಕುಲಂ ಸಾಪ್ತಾಹಿಕ ಎಕ್ಸ್‌ಪ್ರೆಸ್
ಪ್ರಯಾಣಿಕರಿಗೆ ಸೂಚನೆ
ಮುಂಗಾರು ವೇಳಾಪಟ್ಟಿಯಿಂದ ರೈಲುಗಳ ಸಮಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ನವೀಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Comments 2