ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದಾದ್ಯಂತ ಎಲ್ಲ ಪ್ರಯಾಣಿಕರ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ರೈಲ್ವೆ ಬೋರ್ಡ್, ಮೇಲ್, ಎಕ್ಸ್’ಪ್ರೆಸ್, ಪ್ಯಾಸೆಂಜರ್ ಸೇರಿದಂತೆ ಎಲ್ಲ ರೀತಿಯ ರೈಲು ಸಂಚಾರವನ್ನು ಆಗಸ್ಟ್ 15ರವರೆಗೂ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ಜುಲೈ 1ರಿಂದ ಆಗಸ್ಟ್ 12ರವರೆಗೂ ಕಾಯ್ದಿರಿಸಲಾಗಿದ್ದ ಎಲ್ಲ ರೈಲು ಸಂಚಾರದ ಟಿಕೇಟ್’ಗಳನ್ನು ರದ್ದುಪಡಿಸಲಾಗಿದ್ದು, ಪ್ರಯಾಣಿಕರಿಗೆ ಪೂರ್ಣ ಹಣವನ್ನು ಇಲಾಖೆ ಹಿಂತಿರುಗಿಸುತ್ತದೆ.
ಮೇ 12 ರಂದು ಮರು ಆರಂಭವಾದ 12/12 ರಾಜಧಾನಿ ರೈಲು ಸಂಚಾರ ಹಾಗೂ ಮೇ 12ರಂದು ಮರು ಆರಂಭಗೊಂಡ 100/100 ವಿಶೇಷ ರೈಲು ಸಂಚಾರ ಮುಂದುವರೆಯಲಿದೆ.
Get In Touch With Us info@kalpa.news Whatsapp: 9481252093

















