ಬೆಂಗಳೂರು: ಸದಾ ತನ್ನ ವಿಭಿನ್ನ ಕೌತುಕದಿಂದಲೇ ಮಾನವರಿಗೆ ಆಶ್ಚರ್ಯ ಮೂಡಿಸುವ ಪ್ರಕೃತಿ ಇಂದ ತನ್ನ ವಿಭಿನ್ನ ಆಯಾಮವನ್ನು ದರ್ಶನ ಮಾಡಿಸಿದೆ.
ಇಂದು ಮಧ್ಯಾಹ್ನದ ವೇಳೆಗೆ ಸೂರ್ಯ ನೆತ್ತಿ ಮೇಲೆ ಬಂದ ವೇಳೆ ಸೂರ್ಯನ ಸುತ್ತಲೂ ಬೃಹತ್ ಪ್ರಭಾವಳಿಯೊಂದು ಸೃಷ್ಠಿಯಾಗಿದ್ದು, ಕೌತುಕಕ್ಕೆ ಕಾರಣವಾಗಿದೆ.
ಸೂರ್ಯ ಆಗಸದಲ್ಲಿ ಸರಿಯಾಗಿ ಮಧ್ಯದಲ್ಲಿರುವ ವೇಳೆ ಅವನ ಸುತ್ತಲೂ ಬೃಹತ್ ಪ್ರಭಾವಳಿಯೊಂದು ಸೃಷ್ಠಿಯಾಗಿದ್ದು, ಇದು ಕಾಮನಬಿಲ್ಲಿನ ಬಣ್ಣದಂತೆ ಗೋಚರವಾಗಿದೆ.
ವೀಡಿಯೋ ನೋಡಿ
ಈ ಪ್ರಭಾವಳಿಯನ್ನು ವಿಜ್ಞಾನಿಗಳು 22 ಡಿಗ್ರಿ ಹಲೋಸ್ ಎಂದು ಕರೆಯುತ್ತಾರೆ. ಕಾರಣ ಈ ರಿಂಗ್ ಸೂರ್ಯನ ಸುತ್ತ ಸುಮಾರು 22 ಡಿಗ್ರಿಗಳಷ್ಟು ತ್ರಿಜ್ಯವನ್ನು ಹೊಂದಿರುತ್ತದೆ.
ಇನ್ನು, ಸೂರ್ಯನ ಸುತ್ತಲೂ ಉಂಗುರವು ಶೀಘ್ರದಲ್ಲೇ ಮಳೆಯೆಂದು ಅರ್ಥ ಸೂಚಿಸುತ್ತದೆ ಎಂದೂ ಸಹ ಹೇಳಲಾಗುತ್ತದೆ. ಈ ಮಾತಿಗೆ ಸತ್ಯವಿದೆ, ಏಕೆಂದರೆ ಹೆಚ್ಚಿನ ಸಿರಸ್ ಮೋಡಗಳು ಸಾಮಾನ್ಯವಾಗಿ ಚಂಡಮಾರುತದ ಮೊದಲು ಬರುತ್ತವೆ. ಆಕಾಶದಲ್ಲಿ ಸಾಕಷ್ಟು ಸ್ಪಷ್ಟವಾಗಿ ಕಾಣುತ್ತದೆ. ಇನ್ನೂ ಹಲೋಗಳು ನಮ್ಮ ತಲೆಯ ಮೇಲೆ 20,000 ಅಡಿಗಳು ಅಥವಾ ಅದಕ್ಕೂ ಹೆಚ್ಚು ತೇಲುತ್ತಿರುವ ತೆಳುವಾದ ಸಿರಸ್ ಮೋಡಗಳ ಸಂಕೇತವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.
Discussion about this post