ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||
ನವರಾತ್ರಿಯ ನಾಲ್ಕನೆಯ ದಿನ ಪೂಜೆಗೊಳ್ಳುವ ದೇವಿ ಕೂಷ್ಮಾಂಡಾ ರೂಪವಾಗಿದೆ. ತನ್ನ ನಗುವಿನಿಂದ ಅಂಡ ಎಂದರೆ ಬ್ರಹ್ಮಾಂಡವನ್ನು ಸೃಷ್ಟಿಸುವ ರೂಪವೇ ಕೂಷ್ಮಾಂಡಾ ದೇವಿಯದ್ದಾಗಿದೇ.
ನಾಲ್ಕನೇ ದಿಂದ ಚತುರ್ಥಿಯಂದು ಕೂಷ್ಮಾಂಡಾ ದೇವಿಯ ಪೂಜೆ ಮಾಡುತ್ತೇವೆ. ಕೂಷ್ಮಾಂಡಾದೇವಿಯು ಪ್ರಕೃತಿಯ ಸೃಷ್ಟಿಯನ್ನು ತನ್ನ ದೈವಿಕ ಮತ್ತು ಪ್ರಭಾವಿ ನಗುವಿನೊಂದಿಗೆ ಮಾಡುತ್ತಾಳೆ. ಕೂಷ್ಮಾಂಡಾ ದೇವಿಯು ಸೂರ್ಯಮಂಡಲ ಲೋಕದಲ್ಲಿ ವಾಸಿಸುತ್ತಾಳೆ. ಅವಳ ಪ್ರಕಾಶ ಪ್ರಪಂಚಕ್ಕೆಲ್ಲಾ ಪ್ರಪಂಚದ ಪ್ರಾಣಿಗಳಿಗೆಲ್ಲ ಬೆಳಕನ್ನು ನೀಡುವಂತಹದ್ದಾಗಿದೆ.
ಅಷ್ಟ ಭುಜಗಳುಳ್ಳ ದೇವಿಯಾಗಿದ್ದಾಳೆ. ಅವಳ ಕೈಗಳಲ್ಲಿ ಕಮಂಡಲು, ಧನುಷ್, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಗಳಿವೆ. ದೇವಿಯು ಸಿಂಹ ವಾಹಣೆಯಾಗಿದ್ದು ಹಳದಿ ಬಣ್ಣ ಅವಳ ಪ್ರಿಯ ಬಣ್ಣ. ಬಲಿಗಳಲ್ಲಿ ಅವಳಿಗೆ ಕುಂಬಳಕಾಯಿಯೇ ಪ್ರಿಯವಾಗಿದೆ.

ಕೆಂಪು ಬಣ್ಣದ ಪುಷ್ಪಗಳು ಅವಳಿಗೆ ಅತ್ಯಂತ ಪ್ರಿಯವಾಗಿರುತ್ತವೆ. ಭಕ್ತರು ಮಾಲ್ಪುಆ ಸಿಹಿ ತಿನಸು ದೇವಿಗೆ ಪ್ರೀತಿಯಂದು ವಿಶೇಷವಾಗಿ ನಿವೇದಿಸುತ್ತಾರೆ. ದೇವಿಯ ಮಂತ್ರವು “ಓಂ ಕೂಝಷ್ಮಾಂಡಾಯೈ ನಮಃ” ಎಂದಾಗಿದ್ದು ಅವಳ ಸ್ತುತಿ “ಯಾ ದೇವಿ ಸರ್ವ ಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಪಠಿಸಬೇಕು.
ಚತುರ್ಥಿಯು ಗಣಪತಿಯ ಪೂಜೆಯ ವಿಶೇಷ ದಿನವಾಗಿದೆ. ಆಶ್ವಯುಜ ಶುದ್ಧ ಚತುರ್ಥಿಯು “ಕಪರ್ದೀ ಗಣಪತಿ”ಯ ಪೂಜೆಗೆ ವಿಶೇಷ ದಿನವಾಗಿದೆ. ಈ ಪೂಜೆಯ ವಿಶೇಷ ಗಣೇಶನನ್ನು ಇಂದು ಪುರುಷ ಸೂಕ್ತದಿಂದ ಪೂಜಿಸುತ್ತಾರೆ. ಇದು ಎಂತಹ ವಿಶೇಷ ವ್ರತ ಎಂದು ತಿಳಿಯುವ ಕುತೂಹಲದಿಂದ ಕೇಳಿದರೆ ಒಮ್ಮೆ ಶಿವ ಪಾರ್ವತಿಯರು ದ್ಯೂತವನ್ನು ಆಡುತ್ತಿದ್ದರು. ಆಗ ಶಿವನು ಪಾರ್ವತಿಯ ಮುಂದೆ ತನ್ನ ಶ್ರಿಶೂಲ, ಡಮರು, ಹುಲಿ ಚರ್ಮ ಎಲ್ಲವನ್ನೂ ಸೋತನು. ಸೋತ ಪದಾರ್ಥಗಳನ್ನು ಹಿಂತಿರುಗಿ ಕೇಳಿದಾಗ ಪಾರ್ವತಿಯು ಕೊಡುವುದಿಲ್ಲ ಎಂದು ಉತ್ತರಿಸಿದಳು ಇದೇ ಕಾರಣದಿಂದ ಕ್ರುದ್ಧನಾದ ಈಶ್ವರನು ಇನ್ನು ಹನ್ನೆರಡು ದಿವಸಗಳ ಕಾಲ ಮಾತನಾಡುವುದಿಲ್ಲ ಎಂದು ಹೊರಟನು.
ಪತಿಯನ್ನು ಅರೆಸುತ್ತಾ ಪಾರ್ವತಿ ದೇವಿಯು ಕಪರ್ದೀ ಗಣಪತಿಯ ಪೂಜೆ ಮಾಡುತತಿರುವ ಸ್ತ್ರೀಯನ್ನು ನೋಡಿದಳು ಅವರಿಂದ ವಿಧಿ ವಿಧಾನಗಳನ್ನು ತಿಳಿದು ಪೂಜೆ ಮಾಡಿದ ಕೂಡಲೇ ಪಾರ್ವತಿಗೆ ಶಿವನು ಪ್ರತ್ಯಕ್ಷನಾಗಿ ವರವನ್ನು ನೀಡಿದನು. ಈ ವ್ರತವನ್ನು ಮಾಡಿ ವಿಕ್ರಮಾರ್ಕನ ಪತ್ನಿಯು ಮಾಡಿ ಕುಷ್ಠರೋಗ ಮುಕ್ತಳಾಗಿರುವಳು, ಈ ವ್ರತವು ದಾರಿದ್ರ್ಯ ಪರಿಹಾರಕವೂ ಆಗಿದೆ. ಇಂದು ಪುರುಷ ಸೂಕ್ತದಿಂದ ವಿಶ್ವನಾಮಕ ಭಗವಂತನ ಪೂಜೆಯನ್ನು ಮಾಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























Discussion about this post