ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ಎರಡನೇ ದಿನ ಎರಡನೇ ದ್ವಿತೀಯ ತಿಥಿಯಂದು ಭಕ್ತಿ ಮತ್ತು ವೈರಾಗ್ಯದ ಪ್ರತೀಕವೆನಿಸುವ ಬ್ರಹ್ಮಚಾರಿಣಿಯನ್ನು ಪೂಜಿಸುತ್ತೇವೆ.
ಬ್ರಹ್ಮಚಾರಿಣಿ ದೇವಿಯು ತನ್ನ ಗುರುಗಳು ಮತ್ತು ಶಿಷ್ಯರೊಂದಿಗೆ ಆಶ್ರಮದಲ್ಲಿ ವಾಸಿಸುತ್ತಾಳೆ. ನವದುರ್ಗೆಯರಲ್ಲಿ ಎರಡನೇ ರೂಪದ ದೇವಿಯೇ ಬ್ರಹ್ಮಚಾರಿಣಿ. ಬ್ರಹ್ಮ ಎಂದರೆ ದೊಡ್ಡದಾದ್ದು ಬ್ರಹ್ಮ ಎಂದರೆ ತಪಸ್ಸು, ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು, ಯಾರಿಗೆಲ್ಲ ವೈರಾಗ್ಯದ ಅಪೇಕ್ಷೇ ಇದೆಯೋ ಅವರು ಬ್ರಹ್ಮಚಾರಿಣಿಯನ್ನು ಆರಾಧಿಸಬೇಕು. ಭಕ್ತಿಯನ್ನು ಬೇಡುವವರು ಬಯಸುವವರೂ ಕೂಡ ದೇವಿಯನ್ನು ಆರಾಧಿಸುತ್ತಾರೆ.
ಹೋಮ ಕುಂಡದಲ್ಲಿ ಹಾರಿದ ಸತಿದೇವಿ ಹಿಮಾಲಯನ ಪುತ್ರಿಯಾಗಿ ಜನಿಸಿದ ನಂತರ ಶಿವನನ್ನೇ ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದಳು 1000 ವರ್ಷಗಳ ಕಾಲ ಕೇವಲ ಫಲ ಮೂಲಗಳನ್ನು ತಿಂದು ಇದ್ದರೆ, ನೂರು ವರ್ಷಗಳ ಕಾಲ ಕೇವಲ ಒಂದೇ ಎಲೆಯನ್ನು ತಿಂದು ತಪಸ್ಸನ್ನು ಆಚರಿಸಿದಳು ನಂತರ ಸಾವಿರ ವರ್ಷಗಳ ಕಾಲ ನೀರು ಆಹಾರ ಇಲ್ಲದೇ ತಪಸ್ಸನ್ನು ಕಾರಣ ಅಪರ್ಣೆಯಾದಳು. ಇವಳ ಕಷ್ಟಗಳನ್ನು ನೋಡಿ ದುಃಖ ಪಟ್ಟು ಹೀಗೆ ನಿರಾಹಾರಳಾಗಬೇಡೆಂದು ಹೇಳಿದ ಕಾರಣ ಉಮಾ ಆದಳು. ಕೊನೆಗೆ ಅವಳ ತಪಸ್ಸು ಫಲಿಸಿತು.
ಶಿವನನ್ನೇ ಪತಿಯನ್ನಾಗಿ ಪಡೆಯುವ ವರವು ದೊರೆಯಿತು. ಅವಳ ತಪಸ್ಸು ಮತ್ತು ಭಕ್ತಿಯ ಕಾರಣ ಅವಳು ಬ್ರಹ್ಮಚಾರಿಣಿಯಾದಳು ಮತ್ತು ಭಕ್ತಿ ವೈರಾಗ್ಯದ ದೇವಿಯಾದಳು. ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ನಮಗೆ ಸಂಪತ್ತು, ಸಮೃದ್ಧಿ ಮತ್ತು ಸುಖಸಂತೋಷಗಳು ಲಭಿಸುತ್ತವೆ.
ಬ್ರಹ್ಮಚಾರಿಣಿ ದೇವಿಯು ಪ್ರೀತಿ, ನಿಷ್ಠೆ, ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿದ್ದಾಳೆ. ಬ್ರಹ್ಮಚಾರಿಣಿ ದೇವಿಗೆ ಕೆಂಪು ವರ್ಣ ಪ್ರೀತಿಯ ಬಣ್ಣ. ಇವಳ ಎಡಗೈಯಲ್ಲಿ ಕೈಯಲ್ಲಿ ಕಮಂಡಲು ಮತ್ತು ಬಲ ಕೈಯಲ್ಲಿ ರುದ್ರಾಕ್ಷಿ ಮಾಲೆ(ಜಪಮಾಲೆ) ಇರುತ್ತದೆ. ಬ್ರಹ್ಮಚಾರಿಣಿ. ದೇವಿಗೆ ಮಲ್ಲಿಗೆ ಹೂವು ಪ್ರಿಯವಾದ ಪುಷ್ಪವಾಗಿದೆ ದೇವಿ ಶ್ವೇತ ವರ್ಣದ ವಸ್ತ್ರಗಳನ್ನು ಧರಿಸಿರುತ್ತಾಳೆ.
ದೇವಿಯನ್ನು ಪೂಜಿಸುವ ಮಂತ್ರ “ಓಂ ದೇವಿ ಬ್ರಹ್ಮಚಾಣಿಯೈ ನಮಃ” ಎಂದಾಗಿದ್ದು. ದೇವಿಯ ಸ್ತುತಿ” ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣಿ ಸಂಸ್ಥಿತಾ, ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದಾಗಿದೆ.
ಬ್ರಹ್ಮಚಾರಿಣಿದೇವಿಯನ್ನು ಭಕ್ತಿಯಿಂದ ಪೂಜಿಸಿ ಸಮೃದ್ಧಿ ಸಂಪತ್ತು ಸಂತಸದೊಂದಿಗೆ ಭಕ್ತಿ ವೈರಾಗ್ಯವನ್ನು ಪಡೆಯೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post