ಕನ್ನಡದ ಅತ್ಯಂತ ಜನಪ್ರಿಯ ಟಿವಿ ಶೋಗಳಲ್ಲಿ ಅಗ್ಯಗಣ್ಯ ಸ್ಥಾನದಲ್ಲಿರುವ ಮಜಾ ಟಾಕೀಸ್ ಕಾರ್ಯಕ್ರಮವನ್ನು ನೀವು ನೋಡಿರುತ್ತೀರಿ. ಇಂತಹ ವೇದಿಕೆಯೊಂದರಲ್ಲಿ ಕಾಣಿಸಿಕೊಂಡು ಮನೆಮಾತಾದ ಕಲಾವಿದೆಯೇ ನಮ್ಮ ಇಂದಿನ ಲೇಖನದ ಜೀವಾಳ…
ಕಲೆಯನ್ನೇ ಉಸಿರಾಗಿಸಿಕೊಂಡು, ಕಲೆಯನ್ನೇ ದೇವರನ್ನಾಗಿ ಪೂಜಿಸುತ್ತಿರುವ ಅನೇಕ ಕಲಾವಿದರು ನಿರಂತರವಾಗಿ ಕಲಾ ಸರಸ್ವತಿಯ ಸೇವೆ ಮಾಡುತ್ತಲೇ ಬಂದಿದ್ದಾರೆ. ಇಂತಹ ಸಾಲಿಗೆ ಸೇರುವ ನೀಲಾ ಜೇವರ್ಗಿ ಸಹ ಒಬ್ಬರು.

ಕಲೆ ಇವರಿಗೆ ದೈವದತ್ತವಾಗಿ ಬಂದ ವರ
ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ ಕಲಿಯುವ ವಯಸ್ಸಿನಲ್ಲಿ ನೀಲಾಗೆ ಕೆಲವೊಂದು ಅನಿವಾರ್ಯ ಕಾರಣಗಳು ಅಡ್ಡಿಯಾಗುತ್ತವೆ. ಅದು ಸಾಧ್ಯವಾಗದಿದ್ದರೂ ಕಲಿಯಬೇಕೆಂಬ ತುಡಿತ ಇವರಲ್ಲಿ ಮಿಡಿಯುತ್ತಲೇ ಇತ್ತು. ಹೀಗಾಗಿ, ವರ್ಷಗಳೇ ಕಳೆದ ನಂತರ ಛಲಬಿಡದೇ ತಂದೆಯ ಬೆಂಬಿದ್ದು, ಶಾಲೆಗೆ ಸೇರಿಸುವಂತೆ ಕೇಳಿ, 14ನೆಯ ವಯಸ್ಸಿನಲ್ಲಿ ನೇರವಾಗಿ ಏಳನೆಯ ತರಗತಿಗೆ ಸೇರುವಲ್ಲಿ ಯಶಸ್ವಿಯಾದರು.


ಮರುದಿನವೇ ಅವರು ಹೇಳಿದ ಶಾಲೆಯಲ್ಲಿ ಹತ್ತನೇ ತರಗತಿಯ ಪ್ರವೇಶ ಪಡೆದುಕೊಂಡರು. ಆದರೆ, ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರು.
ಛಲ ಬಿಡದೇ ಭರವಸೆಯೊಂದಿಗೆ ಮುನ್ನಡೆದು ಎರಡನೆಯ ಪರೀಕ್ಷೆಯಲ್ಲಿ ಎಲ್ಲರ ನಂಬಿಕೆಯಂತೆ ಉತ್ತೀರ್ಣಗೊಂಡ ದಿನ ಇವರ ಸಂತೋಷಕ್ಕಿಂತಲೂ ತಂದೆಯವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ತಮ್ಮ ಜನ್ಮತಃ ಕಲೆಯನ್ನು ಹೊತ್ತು ಬಂದಿರುವ ಈಕೆ ನಟರಾಜ್ ಹೊನ್ನವಳ್ಳಿಯವರ ಬಳಿ ರಂಗ ತರಬೇತಿ ಪಡೆದರು. ಒಮ್ಮೆ ಅಭಿಮನ್ಯು ಕಾಳಗ ಪೌರಾಣಿಕ ನಾಟಕದಲ್ಲಿ ಅಭಿಮನ್ಯುವಿನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗುರುಗಳ ಪ್ರೀತಿಗೆ ಪಾತ್ರರಾಗಿ ಶಹಬ್ಬಾಸ್ ಎನಿಸಿಕೊಂಡಿದ್ದರು. ಮುಂದೆ ಇದನ್ನು ಗುರುತಿಸಿದ ಸಂಜು, ಸುವರ್ಣ, ಮಿಥುನ್ ಎಂಬ ಪ್ರತಿಭೆಗಳು ಇವರನ್ನೆ ಪ್ರೋತ್ಸಾಹಿಸಿ ಬಿ ಮ್ಯೂಸಿಕ್’ಗೆ ಸೇರಿದರು. ಅಲ್ಲಿ ಕಲಿಯುತ್ತ ಬಿಡುವಿನ ವೇಳೆಯಲ್ಲಿ ಕಾಲೇಜು ಮಕ್ಕಳಿಗೆ ನಾಟಕ ನಿರ್ದೇಶಿಸುತ್ತಾ ಗುರುಗಳೂ ಸಹ ಆದರು.
ಈ ನಡುವೆ ಗೆಳೆಯರೊಬ್ಬರು ಮಜಾ ಭಾರತಕ್ಕೆ ಆಡಿಶನ್ ಕೊಡಲು ಸಹಕರಿಸು ಎಂದು ಕೇಳಿದ್ದರು. ಸಹಕರಿಸಲು ಹೋದ ನೀಲಾಗೆ ಮುಂದೆ ದುಡ್ಡ ಅಚ್ಚರಿಯೊಂದು ಕಾದಿತ್ತು. ಅದು ‘ನೀವು ಸೆಲೆಕ್ಟ್ ಆಗಿದ್ದೀರಿ’ ಎಂಬ ಕರೆ ಬಂದುದಾಗಿತ್ತು. ಇಲ್ಲಿ ಉಲ್ಲೇಖಿಸಲೇಬೇಕಾದ ವಿಷಯವೆಂದರೆ ಇವರನ್ನು ಟೆಲಿವಿಷನ್ ಇಂಡಸ್ಟ್ರಿಗೆ ಪರಿಚಯಿಸಿದವರು ದಿಲೀಪ್ ರಾಜ್. ಅಲ್ಲಿಂದ ಇವರ ಕಲೆಗೊಂದು ಹೊಸ ಮೆರುಗು ಹುಟ್ಟಿಕೊಂಡು, ಮಜಾ ಭಾರತ, ಮಜಾ ಟಾಕೀಸ್, ಕಾಮಿಡಿ ಟಾಕೀಸ್ ಶೋಗಳಲ್ಲಿ ಜನಪ್ರಿಯತೆ ಗಳಿಸಿ, ಇಷ್ಟದೇವತೆ, ಪಾಪ ಪಾಂಡು, ಸಿಲ್ಲಿ ಲಲ್ಲಿ ಧಾರವಾಹಿಗಳಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.

ರಂಗಭೂಮಿಯಿಂದ ಆರಂಭಗೊಂಡ ನೀಲಾ ಅವರ ಕಲಾ ಪಯಣ ಟಿವಿ ಕಾರ್ಯಕ್ರಮ, ಧಾರಾವಾಹಿಗಳಲ್ಲಿ ಸಾಗಿ ಈಗ ಬೆಳ್ಳಿ ತೆರೆಗೆ ಬಂದು ನಿಂತಿದ್ದು, ಸದ್ಯ, ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

ಇವರಲ್ಲಿ ಮಮತಾ ಅವರನ್ನು ನೆನಪಿಸಿಕೊಳ್ಳುವ ನೀಲಾ, ಇದರೊಂದಿಗೆ ಚಲನಚಿತ್ರಕ್ಕೆ ಅವಕಾಶ ನೀಡಿ ಗುರುಗಳ ಸ್ಥಾನಕ್ಕೆ ನಿಂತವರಲ್ಲಿ ದಿಲೀಪ್ ರಾಜ್, ಉತ್ತಮ್, ಸೃಜನ್ ಲೋಕೇಶ್, ತೇಜಸ್ವಿ, ವೆಂಕಟ್, ನವೀನ್ ಮಂಡ್ಯ ಸಂದೀಪ್ ಆಚಾರ್ಯ ಅವರುಗಳ ಸಹಕಾರ ನೆನೆಯುವುದನ್ನು ಮರೆಯುವುದಿಲ್ಲ.
ಕಲಾ ಸರಸ್ವತಿಯ ಸೇವಕಿ ಈ ಕಲಾವಿದೆಯ ಮುಂದಿನ ಜೀವನ ಸುಖಮಯವಾಗಿರಲಿ, ಬಯಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಇವರದಾಗಿರಲಿ,
ಸಾಧನೆ ಎಂಬ ಪದಕ್ಕೆ ಇವರು ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ.











Discussion about this post