ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತ 100 GW ಸ್ಥಾಪಿತ ಸೌರಶಕ್ತಿ ಸಾಮರ್ಥ್ಯ ಮೀರುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಭವಿಷ್ಯದಲ್ಲಿ ದೇಶದ ಸ್ವಚ್ಛ, ಹಸಿರು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ #Pralhad Joshi ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನದಲ್ಲಿ ಭಾರತ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ. 2030ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ನಿಗದಿಪಡಿಸಿದ 500 GW ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯದ ಮಹತ್ವಾಕಾಂಕ್ಷೆಯ ಗುರಿಸಾಧನೆಯತ್ತ ಮಹತ್ವದ ಹೆಜ್ಜೆಯಿರಿಸಿದೆ ಎಂದಿದ್ದಾರೆ.

ಸೂರ್ಯ ಘರ್ ಗೇಮ್ ಚೇಂಜರ್: ಹಸಿರು ಇಂಧನ ಕ್ಷೇತ್ರದಲ್ಲಿ, ಭಾರತ ಸ್ವಾವಲಂಬಿಯಾಗುವ ಜತೆಗೆ ಜಗತ್ತಿಗೇ ಹೊಸ ಮಾರ್ಗ ತೋರಿಸುತ್ತಿದೆ. ಪಿಎಂ ಸೂರ್ಯಘರ್ ಯೋಜನೆ ಸುಸ್ಥಿರ ಇಂಧನದಲ್ಲಿ ಗೇಮ್ ಚೇಂಜರ್ ಆಗಿದೆ. ಪ್ರತಿ ಮನೆಗಳನ್ನೂ ಶುದ್ಧ ವಿದ್ಯುತ್‌ನಿಂದ ಸಬಲೀಕರಣಗೊಳಿಸುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

Also read: ಜನಪರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ ವಿಪಕ್ಷಕ್ಕೆ ಸೋಲು: ಸಚಿವ ಭೋಸರಾಜು
ದೇಶದ ಹೈಬ್ರಿಡ್ ಮತ್ತು ರೌಂಡ್-ದಿ-ಕ್ಲಾಕ್ (RTC) ನವೀಕರಿಸಬಹುದಾದ ಇಂಧನ ಯೋಜನೆಗಳು ಸಹ ವೇಗವಾಗಿ ಮುಂದುವರಿಯುತ್ತಿವೆ. 64.67 GW ಅನುಷ್ಠಾನ ಮತ್ತು ಟೆಂಡರ್ ಹಂತದಲ್ಲಿದೆ. ಇದು ಸೌರ ಮತ್ತು ಹೈಬ್ರಿಡ್ ಯೋಜನೆಗಳ ಒಟ್ಟು ಮೊತ್ತವನ್ನು 296.59 GW ಗೆ ತರುತ್ತದೆ ಎಂದಿದ್ದಾರೆ.

ಕಳೆದ ವರ್ಷ 18.5 GW ಯುಟಿಲಿಟಿ-ಸ್ಕೇಲ್ ಸೌರ ಸಾಮರ್ಥ್ಯದ ಸ್ಥಾಪನೆ ಕಂಡಿತು. ಇದು 2023ಕ್ಕೆ ಹೋಲಿಸಿದರೆ ಸುಮಾರು 2.8 ಪಟ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಉನ್ನತ ಕಾರ್ಯಕ್ಷಮತೆ ರಾಜ್ಯಗಳ ಪಟ್ಟಿಯಲ್ಲಿವೆ.

9 ಲಕ್ಷ ಮೇಲ್ಛಾವಣಿ ಸೌರ ಸ್ಥಾಪನೆ: 2024 ರಲ್ಲಿ ಪ್ರಾರಂಭಿಸಲಾದ PM ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆ 9 ಲಕ್ಷ ಮೇಲ್ಛಾವಣಿ ಸೌರ ಘಟಕ ಸ್ಥಾಪನೆಗಳನ್ನು ಸಮೀಪಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post