ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) #RBI ಅವಿರಾಲ್ ಜೈನ್ #Aviral Jain ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಇಡಿ) ನೇಮಕ ಮಾಡಿದ್ದು, ಅ.1ರಿಂದಲೇ ಈ ಆದೇಶ ಜಾರಿಗೆ ಬರಲಿದೆ.
ಈ ಬಡ್ತಿಗೆ ಮೊದಲು, ಜೈನ್ ಮಹಾರಾಷ್ಟ್ರದ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೇಲ್ವಿಚಾರಣೆ, ಕರೆನ್ಸಿ ನಿರ್ವಹಣೆ, ವಿದೇಶಿ ವಿನಿಮಯ ನಿಯಂತ್ರಣ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ 30 ವರ್ಷಗಳ ಅನುಭವ ಹೊಂದಿದ್ದಾರೆ.
Also read: ಸಂಗೀತ ಯಾವುದೇ ಜಾತಿಯ ಸ್ವತ್ತಲ್ಲ ಸಾಧನೆ ಬಹಳ ಮುಖ್ಯ: ನಟರಾಜ್ ಭಾಗವತ್
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಅವಿರಾಲ್ ಜೈನ್ ಅವರು ಮೇಲ್ವಿಚಾರಣೆ, ಕರೆನ್ಸಿ ನಿರ್ವಹಣೆ, ವಿದೇಶಿ ವಿನಿಮಯ ನಿಯಂತ್ರಣ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಹಾಗೂ ಅವರು ಐಐಬಿಎಫ್ ನ ಪ್ರಮಾಣೀಕೃತ ಅಸೋಸಿಯೇಟ್ ಕೂಡ ಆಗಿದ್ದಾರೆ.
ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಜೈನ್ ಕಾನೂನು ಇಲಾಖೆ, ಮತ್ತು ಮಾಹಿತಿ ಹಕ್ಕು ಕಾಯ್ದೆ (ಮೊದಲ ಮೇಲ್ಮನವಿ ಪ್ರಾಧಿಕಾರವಾಗಿ) ಮೇಲ್ವಿಚಾರಣೆ ನಡೆಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post