ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸಮಾಜದಲ್ಲಿ ಕಲೆ ಮತ್ತು ಸಾಹಿತ್ಯ ದೇಶದ ಅವಿಭಾಜ್ಯ ಅಂಗವಾಗಿದ್ದು ಅನಾಧಿಕಾಲದಿಂದ ಒಂದು ಸೂಕ್ತ ವ್ಯವಸ್ಥೆಯಲ್ಲಿ ಗುರು ಮುಖೇನ ಕಲಿಯುವುದು ಈ ದೇಶದ ಪರಂಪರೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ನಟರಾಜ್ ಭಾಗವತ್ ಹೇಳಿದ್ದಾರೆ.
ಅವರು ಕಲ್ಲಹಳ್ಳಿ ವಿನೋಬನಗರದ ಶ್ರೀ ಅಭಿಷ್ಟ ವರದ ಗಣಪತಿ ದೇವಸ್ಥಾನದ ಅವರಣದಲ್ಲಿ ಶ್ರೀನಾದ ಸಂಗೀತ ವಿದ್ಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಲೆ ಸಾಹಿತ್ಯಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ ಸಾಧನೆ ಮಾಡುವುದು ಮುಖ್ಯ ರಿಯಾಲಿಟಿ ಶೋಗಳಲ್ಲಿ ಪ್ರಶಸ್ತಿ ಪಡೆದವರು ಅಷ್ಟೇ ಬೇಗ ಕಾಣೆಯಾಗಿದ್ದಾರೆ. ಗುರು ಮುಖೇನ ವಿದ್ಯೆ ಕಲಿತು ಸಾಧನೆ ಮಾಡಿದವರು ಶಾಶ್ವತವಾಗಿ ಇರುತ್ತಾರೆ ಎಂದರು.
ಸಂಗೀತ ಪಿತಾಮಹರಾದ ಕನಕ ಪುರಂದರ ದಾಸರು ಬ್ರಾಹ್ಮಣರಲ್ಲ ಸಂಗೀತ ಯಾವುದೇ ಜಾತಿಯ ಸ್ವತ್ತಲ್ಲ ಸಾಧನೆ ಬಹಳ ಮುಖ್ಯ ಸಂಗೀತವೆಂದರೆ ದೊಡ್ಡ ತಪಸ್ಸು ಸಂಗೀತ ಆತ್ಮದಿಂದ ಬರಬೇಕು ನಮ್ಮನ್ನು ನಾವು ಆತ್ಮ ಸಂತೃಪ್ತಿಗಾಗಿ ಸಂಗೀತದಲ್ಲಿ ತೊಡಗಿಸಿಕೊಳ್ಳಬೇಕು. ಸೋತ್ರಗಳನ್ನು ಮೆಚ್ಚಿಸಲು ಸಂಗೀತ ಇರುವುದಲ್ಲ. ದೇವರು ಪ್ರಕೃತಿಯಲ್ಲಿಯೇ ಸಪ್ತಸ್ವರಗಳನ್ನು ಇಟ್ಟಿದ್ದಾನೆ ಪ್ರಾಣಿ ಪಕ್ಷಿಗಳು ನಮಗೆ ಅನೇಕ ಸ್ವರಗಳನ್ನು ನೀಡಿದೆ ಅದನ್ನು ಲಯಬದ್ಧವಾಗಿ ಮನುಷ್ಯ ಸಂಗೀತವನ್ನಾಗಿ ಮಾಡಿದ್ದಾನೆ ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಂಸ್ಕಾರ ಸಂಸ್ಕೃತಿ ಸಂಗೀತದ ಬಗ್ಗೆ ಅರಿವು ಮೂಡಿಸಿ ಅವರಿಗೆ ಉತ್ತೇಜರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಗೀತ ವಿದ್ವಾನ್ ಜಿ ಅರುಣ್ ಕುಮಾರ್ ಮಾತನಾಡಿ ಶಾಸ್ತ್ರೀಯ ಸಂಗೀತ ಕಲಿಯಲು ಶ್ರದ್ಧಾ ಭಕ್ತಿ ಬೇಕು. ಗುರು ಮುಖೇನ ಕಲಿಯಬೇಕು ಶರೀರದ ಒಳಚಕ್ರ ಗಳನ್ನು ಸರಿಪಡಿಸುವ ಮತ್ತು ಉದ್ದಿಪನಗೊಳಿಸುವ ಶಕ್ತಿ ಸಂಗೀತಕ್ಕಿದೆ ಸಂಗೀತ ಕಲಿಕೆ ಪ್ರದರ್ಶನಕ್ಕೆ ಸೀಮಿತ ಮಾಡದೆ ಸಾಧನೆಗೂ ಉಪಯೋಗಿಸಿಕೊಳ್ಳಬೇಕು ಎಂದರು
Also read: ದಸರಾಗೆ ಮೈಸೂರಿಗೆ ಭೇಟಿ ನೀಡಿದ್ದೀರಾ? ಹಾಗಾದರೆ ತಪ್ಪದೇ ಬನಶಂಕರಿ ಗೊಂಬೆ ಮನೆ ಅಲಂಕಾರ ಕಣ್ತುಂಬಿಕೊಳ್ಳಿ
ನಿವೃತ್ತ ಪ್ರಾಂಶುಪಾಲರಾದ ರಾಮಚಂದ್ರ ದೇವರು ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀನಾದ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಸರಸ್ವತಿ ಅಡಿಗ ಮಾತನಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತ ದೇವರನಾಮಗಳನ್ನು ಕಲಿಯಲು ಆಸಕ್ತಿ ಇರುವವರು ನಮ್ಮನ್ನು ಸಂಪರ್ಕಿಸಬಹುದು ಕಲಿತ ವಿದ್ಯೆಯನ್ನು ಸಮಾಜಕ್ಕೆ ದಾರೆಎರೆಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.
ಕಾರ್ಯಕ್ರಮವನ್ನು ನಾಗಮಣಿ ಅವರು ನಿರೂಪಿಸಿದರು ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಅಡಿಗ ಹಾಗೂ ದೇವಾಲಯದ ಅರ್ಚಕರು ಶ್ರೀನಾದ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಸಂಗೀತ ಕಲಿಯಲು ಆಸಕ್ತಿ ಇದ್ದವರು ಮೊ.ಸಂ. 8310631848 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post