ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬೆಂಗಳೂರು |
ಉಪಮುಂಖ್ಯಮಂತ್ರಿ ಡಿ.ಕೆ. ಶಿವಕುಮಾರ್ DCM DK Shivakumar ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿ, ತನಿಖೆ ನಡೆಸುತ್ತಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ Supreme Court ವಜಾ ಮಾಡಿದೆ.
ಈ ಕುರಿತಂತೆ ಸುಪ್ರೀಂ ಕೋರ್ಟ್ ನ್ಯಾ.ಸೂರ್ಯಕಾಂತ್ ನೇತೃತ್ವದ ಪೀಠ ಇಂದು ಆದೇಶ ಹೊರಡಿಸಿದ್ದು, ಡಿಸಿಎಂ ಡಿಕೆಶಿ ಇಡಿ 120 ಬಿ ವಿರುದ್ಧದ ಪ್ರಕರಣವನ್ನು ವಜಾ ಮಾಡಿದೆ.
ಈ ಆದೇಶದ ಮೂಲಕ ಡಿಕೆಶಿಗೆ ಬಿಗ್ ರಿಲೀಫ್ ದೊರೆತಿದ್ದು, ಪ್ರಕರಣ ಸಂಬAಧ ಇನ್ನು ಮುಂದೆ ಅವರು ಇಡಿ ವಿಚಾರಣೆಗೆ ಹಾಜರಾಗುವಂತಿಲ್ಲ ಎಂದು ವರದಿಯಾಗಿದೆ.
Also read: ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟದ ಹಲವು ಸದಸ್ಯರಿಗೆ ಬಾಂಬ್ ಬೆದರಿಕೆ
ಡಿಕೆಶಿ ವಿರುದ್ಧ ದೂರು ಏನಾಗಿತ್ತು?
2017ರಲ್ಲಿ ಶಿವಕುಮಾರ್ ಅವರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಅವರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಡಿಕೆಶಿ ನಿಕಟವರ್ತಿಗಳ ಮನೆಯಲ್ಲಿ ದೊರೆತಿದ್ದ ಹಣ ಅವರ ಬೇನಾಮಿ ಎಂದು ಆರೋಪಿಸಿ 2020ರಲ್ಲಿ ಸಿಬಿಐ ಎಫ್’ಐಆರ್ ದಾಖಲಿಸಿತ್ತು.
120 ಬಿ ಅಡಿಯಲ್ಲಿ ಇಡಿ ದಾಖಲಿಸಿರುವ ಈ ಕ್ರಿಮಿನಲ್ ಪ್ರಕರಣದಿಂದ ತಮ್ಮನ್ನು ದೋಷಮುಕ್ತಗೊಳಿಸಬೇಕು ಎಂದು ಕೋರಿ ಡಿಕೆಶಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್’ನಲ್ಲಿ ಜಯ ಸಿಗದ ಹಿನ್ನೆಲೆ ಡಿಕೆಶಿ ಸುಪ್ರೀಂಕೋರ್ಟ್’ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈಗ ಅವರ ಪರವಾಗಿ ತೀರ್ಪು ಬಂದಿದ್ದು, ಡಿಕೆಶಿಗೆ ಬಿಗ್ ರಿಲೀಫ್ ದೊರೆತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post