ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅನಾರೋಗ್ಯದ ನೆಪ ನೀಡಿ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗಳಿಗೆ ಕೆಲಸದಿಂದ ವಜಾ ಮಾಡುವ ಮೂಲಕ ಶಾಶ್ವತ ರಜೆಯ ಶಾಕ್ ಅನ್ನು ಏರ್ ಇಂಡಿಯಾ #Air India ನೀಡಿದೆ.
ಅನಾರೋಗ್ಯದ ನೆಪ ನೀಡಿ ಸುಮಾರು 200ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಮಂಗಳವಾರ ಸಾಮೂಹಿಕ ರಜೆ ಹಾಕಿದ್ದರು. ಈ ಕಾರಣದಿಂದಾಗಿ ಬುಧವಾರ ಸುಮಾರು 70ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.
ಈ ಘಟನೆಯು ಏರ್ ಇಂಡಿಯಾ ಸಂಚಾರದ ಮೇಲೆ ಪರಿಣಾಮ ಬೀರಿರುವುದರಿಂದ ರಜೆಯ ಮೇಲೆ ತೆರಳಿದ್ದ ನೌಕಕರನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಜಾಗೊಳಿಸಿದೆ. ಒಟ್ಟು 35 ಮಂದಿ ನೌಕರರಿಗೆ ವಜಾ ಪತ್ರ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಸಿಬ್ಬಂದಿಗಳಿಗೆ ಕಳುಹಿಸಿದ ವಜಾಪತ್ರದಲ್ಲಿ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಕೆಲಸ ಮಾಡುವ ಮೊದಲು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಉಲ್ಲೇಖಿಸಿದೆ.
ಅಲ್ಲದೇ ಸಿಬ್ಬಂದಿಗಳಿಗೆ, ನಿಮ್ಮ ಕಾರ್ಯವು ಸಾರ್ವಜನಿಕ ಹಿತಾಸಕ್ತಿಗಳಿಗೆ ಹಾನಿಯುಂಟುಮಾಡುವುದು ಮಾತ್ರವಲ್ಲದೆ, ಕಂಪನಿಗೆ ಮುಜುಗರ, ಗಂಭೀರ ಅಪಖ್ಯಾತಿ ಮತ್ತು ಗಂಭೀರ ವಿತ್ತೀಯ ನಷ್ಟವನ್ನು ಉಂಟುಮಾಡಿದೆ ಎಂದು ಉಲ್ಲೇಖಿಸಿದೆ.
Also read: ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ ಪತ್ರಕರ್ತ ದಂಪತಿ ಪುತ್ರಿಯ ಸಾಧನೆ
ನೌಕರರನ್ನು ವಜಾಗೊಳಿಸಿದ ಹಿಂದಿನ ಕಾರಣವನ್ನು ಉಲ್ಲೇಖಿಸಿರುವ ವಿಮಾನಯಾನ ಸಂಸ್ಥೆಯು, ಸಂಬಂಧಪಟ್ಟ ನೌಕರರು ಯಾವುದೇ ಸರಿಯಾದ ಕಾರಣವಿಲ್ಲದೆ ಉದ್ದೇಶಪೂರ್ವಕವಾಗಿ ಕೆಲಸದಿಂದ ದೂರ ಸರಿದಿದ್ದಾರೆ. ಟೇಕಾಫ್ ಆಗುವ ಮುನ್ನವೇ ಅವರ ಕಣ್ಮರೆಯಾಗಲು ಯಾವುದೇ ಕಾರಣವಿದ್ದಂತೆ ಕಾಣುತ್ತಿಲ್ಲ. ಸಾಮೂಹಿಕ ಮಟ್ಟದಲ್ಲಿ ಅನಾರೋಗ್ಯ ರಜೆ ತೆಗೆದುಕೊಳ್ಳುವುದು ಸಹ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕಂಪನಿ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post