ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನೀವು ಸ್ವಂತ ವ್ಯವಹಾರದ ಕನಸು ಕಂಡಿದ್ದೀರಾ? ಇದಕ್ಕಾಗಿ ಹಣಕಾಸಿನ ಸಹಾಯ ನಿರೀಕ್ಷಿಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಪ್ರಧಾನಿ ನರೇಂದ್ರ ಮೋದಿ #PM Narendra Modi ಸರ್ಕಾರದ ಗುಡ್ ನ್ಯೂಸ್ ಇಲ್ಲಿದೆ…
ಹೌದು… ಮೂರನೇ ಬಾರಿ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ #Nirmala Sitaraman ಮಂಡಿಸಿದ್ದು, ಸ್ವಂತ ವ್ಯವಹಾರದ ಕನಸು ಕಂಡಿರುವವರಿಗೆ ಹಣಕಾಸಿನ ಸಹಾಯದ ಮಹತ್ವದ ಘೋಷಣೆ ಮಾಡಿದ್ದಾರೆ.

ಈವರೆಗೀ ಮುದ್ರಾ ಯೋಜನೆಯಡಿಯಲ್ಲಿ #Mudra Scheme ನೀಡಲಾಗುತ್ತಿದ್ದ ಮೊತ್ತವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಕ್ಕೆ ಮೋದಿ ಸರ್ಕಾರ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾಲದ ಮೊತ್ತದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
Also read: ಕೇಂದ್ರ ಬಜೆಟ್‌ನಲ್ಲಿ ತೆರಿಗೆ ದರ ಪರಿಷ್ಕರಣೆ | ಇಷ್ಟು ಲಕ್ಷದವರೆಗಿನ ಆದಾಯಕ್ಕೆ ಸಿಗಲಿದೆ ವಿನಾಯಿತಿ
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಯುವ ಸಮುದಾಯಕ್ಕೆ ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ.
ಈವರೆಗೂ ಎಷ್ಟು ಮಂದಿ ಲಾಭ ಪಡೆದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post