ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಮೂರನೇ ಅವಧಿಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೂ ಕೆಲವೇ ಗಂಟೆಗಳ ಮುನ್ನ ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ #Gold and Silver Price ಏಕಾಏಕಿ ಕುಸಿದಿದೆ.
ನಿರ್ಮಲಾ ಸೀತಾರಾಮನ್ #Nirmala Sitharaman ಅವರು ಈ ಬಾರಿ ತಮ್ಮ 9ನೇ ಬಾರಿಯ ಬಜೆಟ್ #Budget ಮಂಡನೆ ಮಾಡಲಿದ್ದು, ಹತ್ತು ಹಲವು ನಿರೀಕ್ಷೆಗಳು ಗರಿಗೆದರಿವೆ. ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿಯ ಬೆಲೆ ಕುಸಿದಿದೆ.
ಇಂದು ಮುಂಜಾನೆ ಕೆಜಿ ಬೆಳ್ಳಿ ದರದಲ್ಲಿ 27 ಸಾವಿರ ರೂ. ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ ದರ 9 ಸಾವಿರ ರೂ. ಇಳಿಕೆಯಾಗಿದೆ.
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ರೂ.1,62,240 ಮತ್ತು ಬೆಳ್ಳಿ ಪ್ರತಿ ಕೆಜಿಗೆ ರೂ.2,78,000 ದಾಖಲಾಗಿದೆ.
ಇನ್ನು ಬೆಳ್ಳಿ ಕೆಜಿಗೆ ರೂ.50,000 ಕ್ಕೆ ಇಳಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ 1 ಗ್ರಾಂ 24ಓ ಚಿನ್ನದ ಬೆಲೆ ರೂ.16,058 ಇದೆ. 22ಓ ಚಿನ್ನ 1 ಗ್ರಾಂ ರೂ.14,720 ಇದೆ. ಮತ್ತು 1 ಗ್ರಾಂ 18ಓ ಚಿನ್ನದ ದರ ರೂ.12,044 ಇದೆ.
ಜನವರಿ 30 ರಂದು ರೂ.1,80,000 ಕ್ಕಿಂತ ಹೆಚ್ಚು ಇದ್ದ ಚಿನ್ನ ರೂ.1,55,000 ಕ್ಕೆ ಇಳಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















